ಧಾರವಾಡ: ಧಾರವಾಡ ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದಲ್ಲಿ ಕಾರ್ಗಿಲ್ ಯುದ್ಧದ 23ನೇ ವಿಜಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಸೈನಿಕ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ಕರ್ನಾಟಕ 24 ಎನ್‌ಸಿಸಿ ಬಟಾಲಿಯನ್ ಘಟಕದ ಕೆಡೆಟ್‌ಗಳು ಕಾರ್ಗಿಲ್ ಸ್ತೂಪ ಹಾಗೂ ಅತಿಥಿಗಳಿಗೆ ಗೌರವ ರಕ್ಷೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲಾಡಳಿತದಿಂದ ಮತ್ತು ಜಿಲ್ಲಾ ಸೈನಿಕ ಮಂಡಳಿ ವತಿಯಿಂದ ನಿರ್ದೇಶಕ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಡಾ.ಯು.ಎಸ್ ದಿನೇಶ ಹಾಗೂ ವಿವಿಧ ಹುದ್ದೆಗಳ ನಿವೃತ್ತ ಸೇನಾಧಿಕಾರಿಗಳಾದ ಸುಬೇದಾರ ಮೇಜರ್ ಉಮೇಶ ಅಕ್ಕಿಹಾಳ ಅವರು ಭೂ ಸೇನೆ ಪರವಾಗಿ, ಲೆಫ್ಟಿನಂಟ್ ವಿಜಯ ಪಾಟೀಲ್ ಅವರು ನೌಕಾಪಡೆ ಪರವಾಗಿ, ಸರ್ಜಂಟ್ ಜಗದೀಶ ಕುರಬೆಟ್ಟ ಅವರು ವಾಯು ಸೇನೆ ಪರವಾಗಿ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.
ಕರ್ನಾಟಕ 24 ಎನ್‌ಸಿಸಿ ಬಟಾಲಿಯನ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಅಜಯ ಆರ್.ಚೌದರಿ, ಸೇನಾ ಮೆಡಲ್ ಸುಬೇದಾರ ಗಿರಿಧರ ಸಿಂಗ್, ಕರ್ನಾಟಕ 5 ಎನ್‌ಸಿಸಿ ಗರ್ಲ್ಸ್ ಬಟಾಲಿಯನ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆ.ಪಿ.ಮಿಶ್ರಾ ಹಾಗೂ ಇತರ ನಿವೃತ್ತ ಸೇನಾಧಿಕಾರಿಗಳು, ಸೈನಿಕರು, ವಿದ್ಯಾರ್ಥಿಗಳು ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಿದರು.
Kshetra Samachara
26/07/2022 12:10 pm