ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದಲ್ಲಿ ಅಜಾದಿ ಅಮೃತ ಮಹೋತ್ಸವ: ಬೈಕ್ ರ್‍ಯಾಲಿಗೆ ಜಿಎಂ ಚಾಲನೆ

ಹುಬ್ಬಳ್ಳಿ: ಗುಣಮಟ್ಟದ ಸೇವೆಯ ಮೂಲಕ ಸಾಕಷ್ಟು ಜನಮನ್ನಣೆ ಪಡೆದಿರುವ ನೈಋತ್ಯ ರೈಲ್ವೆ ವಲಯ ತನ್ನ ಜವಾಬ್ದಾರಿಗಳೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹೆಸರು ಮಾಡಿದೆ. ಈ ಹಿನ್ನೆಲೆಯಲ್ಲಿ ಅಜಾದಿಕಾ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಣೆ ಮಾಡಿದೆ.

ಹೌದು.. ನೈಋತ್ಯ ರೈಲ್ವೆ ವಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಎಸ್.ಡಬ್ಲೂ.ಆರ್ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕಿಶೋರ್ ಚಾಲನೆ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಹಾಗೂ ಬೈಕ್ ರ್‍ಯಾಲಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇನ್ನೂ ಅಮೃತ ಮಹೋತ್ಸವದ ಅಂಗವಾಗಿ ಆರ್ ಪಿಎಫ್/ನೈಋತ್ಯ ರೈಲ್ವೆ ಇದುವರೆಗೆ ವಿವಿಧ ರೈಲು ನಿಲ್ದಾಣಗಳಲ್ಲಿ 3500 ಸಸಿಗಳನ್ನು ನೆಡಲಾಗಿದೆ, 37 ನಿಲ್ದಾಣಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಜಲ ಸೇವೆಯನ್ನು ನಡೆಸಿದೆ, 37 ನಿಲ್ದಾಣಗಳಲ್ಲಿ 550 ಆರ್ ಪಿಎಫ್ ಸಿಬ್ಬಂದಿಯನ್ನು ತೊಡಗಿಸಿಕೊಂಡಿರುವ ಸ್ವಚ್ಛತಾ ಅಭಿಯಾನ, ರನ್ ಫಾರ್ ಯೂನಿಟಿ ನಡೆಸಲಾಗಿದೆ.

ಒಟ್ಟಿನಲ್ಲಿ ಅಮೃತ ಮಹೋತ್ಸವದ ಕಳೆ ಎಲ್ಲೆಡೆಯೂ ಮೆರಗನ್ನು ಪಡೆಯುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆ ಮುನ್ನವೇ ಸಾಕಷ್ಟು ಪ್ರಮಾಣದಲ್ಲಿ ಕಳೆಗಟ್ಟಿರುವುದು ವಿಶೇಷವಾಗಿದೆ.

Edited By : Nagesh Gaonkar
Kshetra Samachara

Kshetra Samachara

18/07/2022 07:00 pm

Cinque Terre

15.07 K

Cinque Terre

0

ಸಂಬಂಧಿತ ಸುದ್ದಿ