ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಪ್ರೌಢಶಾಲೆ ಆವರಣ ರವಿವಾರ ಸಿಹಿ ನೆನಪುಗಳಿಂದ ಮಿಂದೆದ್ದು ಹೋಗಿತ್ತು. ಕಾರಣ 2006-07ನೇ ಸಾಲಿನ ಬೆಳ್ಳಿ ಹಬ್ಬ ವರ್ಷಾಚರಣೆಯ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಹಾಗೂ ಉಪನಿರ್ದೇಶಕಿ ಎನ್.ಕೆ ಸಾವಕಾರ ಮಾತನಾಡಿ ಗುರುವಿನಷ್ಟೇ ಶಿಷ್ಯರೂ ಬೆಳೆದು ನಿದರ್ಶನೀಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಆಗ ಅದೇ ನಮ್ಮ ಬಹುಮಾನ, ಅದೇ ನಮ್ಮ ನೈಜ ಸನ್ಮಾನ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಶಾಲೆಯ 2006-07ನೇ ಸಾಲಿನ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನಿವೃತ್ತ ಹಾಗೂ ಸೇವೆಯಲ್ಲಿರುವ ಎಲ್ಲ ಗುರುವೃಂದವನ್ನು ಸನ್ಮಾನಿಸಿ ಗೌರವಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಅಪರ ಆಯುಕ್ತರ ಕಚೇರಿಯ ಕಿರಿಯ ಸಂಶೋಧನಾಧಿಕಾರಿ ಎಂ.ಎ ಮಾಡಲಗೇರಿ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬಮ್ಮಕ್ಕನವರ, ಹಾಗೂ ನರೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಬಳಗಾರ ಸೇರಿದಂತೆ ನರೇಂದ್ರ ಗ್ರಾಮ ಪಂಚಾಯತಿಯ ಪದಾಧಿಕಾರಿಗಳು ಮತ್ತು ಗ್ರಾಮದ ಗಣ್ಯರು ಗುರುವಂದನೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹಾಗೂ ಎಲ್ಲ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕ-ಶಿಕ್ಷಕಿಯರೊಂದಿಗೆ ಸೆಲ್ಫಿ ತೆಗೆದುಕೊಂಡು ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.
Kshetra Samachara
18/07/2022 03:56 pm