ನವಲಗುಂದ : ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ವತಿಯಿಂದ ನವಲಗುಂದ ಪರಿವಿಕ್ಷಣ ಮಂದಿರದಲ್ಲಿ ಹಸಿರುಕ್ರಾಂತಿ ಹರಿಕಾರರಾದ ಮಾಜಿ ಪ್ರದಾನ ಮಂತ್ರಿಗಳಾದ ಡಾ.ಬಾಬು ಜಗಜೀವನ ರಾಂ ರವರ 36ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನದಲ್ಲಿ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಗದಗ ಜಿಲ್ಲಾ ಸಂಯೋಜಕರಾದ ಮಂಜುನಾಥ್ ಏನ್, ಜಿಲ್ಲಾ ಸಂಘಟನಾ ಸಂಚಾಲಕರಾದ ಮಾದೇವ ಬಾಗೂರು, ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಸಂಘಟನಾ ಸಂಚಾಲಕರು ಕರಿಯಪ್ಪ ಚಲವಾದಿ, ಯಲ್ಲಪ್ಪ ಮಾದರ, ಸಂತೋಷ ಮಾದರ, ಮಂಜವ್ವ ಮೇಲಿನಮನಿ. ಮಹಾದೇವಿ ಮಾದರ ಉಪಸ್ಥಿತರಿದ್ದರು.
Kshetra Samachara
06/07/2022 06:36 pm