ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಾಲಾ ಮಕ್ಕಳಿಗೆ ಆಟಿಕೆ ತಯಾರಿಕೆ ಸ್ಪರ್ಧೆ, ಮಕ್ಕಳಲ್ಲಿ ಉತ್ಸಾಹ

ಕುಂದಗೋಳ : ಇಂದು ಎಲ್ಲೇಡೆ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ, ಈ ಅಮಾವಾಸ್ಯೆ ದಿನ ಎಲ್ಲೇಡೆ ಬಸವಣ್ಣ ರೂಪಿ ಮಣ್ಣಿನ ಎತ್ತುಗಳ ರೈತಾಪಿ ಪೂಜೆ ನಡೆಯುತ್ತಿದೆ.

ಇಂತಹ ವಿಶೇಷ ದಿನವೇ ಇಲ್ಲೋಂದು ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಮಣ್ಣಿನ ಎತ್ತುಗಳು, ಅಡುಗೆ ಸಾಮಾಗ್ರಿ, ಆಮೆ, ಗಣಪ ಅಬ್ಬಾ ! ಒಂದಾ ಎರೆಡಾ ಚಿಣ್ಣರ ಕೈಯಲ್ಲಿ ನೂರೆಂಟು ಮೂರ್ತಿಗಳು ಮಣ್ಣಿನಲ್ಲಿ ತಯಾರಾಗಿವೆ.

ಕುಂದಗೋಳ ಪಟ್ಟಣದ ವಿವೇಕಾನಂದ ಶಾಲಾ ಶಿಕ್ಷಕರು ಮಕ್ಕಳಿಗೆ ಮಣ್ಣಿನಲ್ಲಿ ಆಟಿಕೆ ವಸ್ತು ತಯಾರಿಸುವ (Clay modeling) ಸ್ಪರ್ಧೆ ಆಯೋಜಿಸಿ ಮಕ್ಕಳಲ್ಲಿ ಉತ್ಸಾಹ ತುಂಬಿದರು.

ಅಷ್ಟೇ ಉತ್ಸಾಹದಿಂದ ಮಕ್ಕಳು ಸಹ ಆಟಿಕೆ ವಸ್ತುಗಳನ್ನು ತಯಾರಿಸಿ ಸಂತೋಷ ಪಟ್ಟು ಎಲ್ಲವೂ ರೆಡಿಮೆಡ್ ಸಿಗುತ್ತಿರುವ ಕಾಲದಲ್ಲಿ ಮಕ್ಕಳೇ ಮಣ್ಣಿನ ಎತ್ತುಗಳನ್ನು ಮಾಡಿ ಸಂಭ್ರಮಿಸಿದರು.

Edited By : Nagesh Gaonkar
Kshetra Samachara

Kshetra Samachara

28/06/2022 09:30 pm

Cinque Terre

82.92 K

Cinque Terre

0

ಸಂಬಂಧಿತ ಸುದ್ದಿ