ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಂದೊಂದು ಚಿತ್ರದಲ್ಲಿ ಒಂದೊಂದು ಸಂದೇಶ: ಗಮನಸೆಳೆದ ಚಿತ್ರಕಲಾ ಪ್ರದರ್ಶನ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಕಲೆ ಎಂಬುದು ಯಾರ ಸ್ವತ್ತೂ ಅಲ್ಲ. ಕಲೆ ಕರಗತ ಮಾಡಿಕೊಳ್ಳಲು ಹಿತಾಸಕ್ತಿ ಬೇಕು. ಅಲ್ಲದೇ ತಾವು ಕಲಿತ ಕಲೆಯ ಮೂಲಕ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂದಕೊಂಡವರು ಅನೇಕರಿದ್ದಾರೆ. ಅವರ ಸಾಲಿನಲ್ಲೇ ಇರುವ ಧಾರವಾಡದ ಡ್ಯಾನಿಯಲ್ ದಾರಾ ಅವರು ತಮ್ಮ ವಿಭಿನ್ನ ಶೈಲಿಯ ಮೂಲಕ ಬಿಡಿಸಿದ ಚಿತ್ರಗಳನ್ನು ಧಾರವಾಡದಲ್ಲಿ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಹೀಗೆ ದೃಶ್ಯಗಳಲ್ಲಿ ಕಾಣುತ್ತಿರುವ ಪೇಯಿಂಟಿಂಗ್ ಚಿತ್ರಗಳು ಧಾರವಾಡದ ರಾಜೀವಗಾಂಧಿ ಸಿಬಿಎಸ್‌ಸಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಡ್ಯಾನಿಯಲ್ ದಾರಾ ಅವರು ಬಿಡಿಸಿರುವ ಚಿತ್ರಗಳು. ಎರಡು ದಿನಗಳ ಕಾಲ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸಭಾಭವನದಲ್ಲಿ ಅವುಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಡ್ಯಾನಿಯಲ್ ಬಿಡಿಸಿದ ತಾಯಿ, ಮಗಳ ಚಿತ್ರ, ಪ್ರಕೃತಿಯ ಸೊಬಗಿನ ಚಿತ್ರ ಸೇರಿದಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಚಿತ್ರಗಳು ಎಲ್ಲರ ಗಮನಸೆಳೆದವು. ಎರಡು ದಿನಗಳ ಕಾಲ ಅನೇಕ ಕಲಾಸಕ್ತರು ಬಂದು ಚಿತ್ರಗಳನ್ನು ನೋಡಿ ಕಣ್ತುಂಬಿಕೊಂಡರು.

ಡ್ಯಾನಿಯಲ್ ಅವರು ಬಿಡಿಸಿರುವ ಚಿತ್ರಗಳು ಒಂದೊಂದು ಸಂದೇಶ ಸಾರುತ್ತವೆ. ಅವುಗಳನ್ನು ನೋಡಿ ಮನಸ್ಸಿಗೆ ಒಂದು ರೀತಿಯ ಉಲ್ಲಾಸವುಂಟಾಯಿತು ಎಂದು ವಿದ್ಯಾರ್ಥಿನಿ ಜೋಸ್ನಾ ತಿಳಿಸಿದ್ಲು.

ಡ್ಯಾನಿಯಲ್ ಅವರು ಕಳೆದ 22 ವರ್ಷಗಳಿಂದ ಚಿತ್ರಕಲೆ ಮಾಡುತ್ತಿದ್ದು, ಗೋವಾ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರ ಪ್ರದರ್ಶನ ಮಾಡಿದ್ದಾರೆ. ಧಾರವಾಡದಲ್ಲೂ ಚಿತ್ರಪ್ರದರ್ಶನ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

Edited By : Manjunath H D
Kshetra Samachara

Kshetra Samachara

19/06/2022 12:49 pm

Cinque Terre

31.15 K

Cinque Terre

0

ಸಂಬಂಧಿತ ಸುದ್ದಿ