ಹುಬ್ಬಳ್ಳಿ : ದೆಹಲಿಯ ಸ್ಟಾರ್ ಲೈಪ್ ಆಡಿಷನ್ಸ್ ನವರು ಉತ್ತರ ಪ್ರದೇಶದ ಆಗ್ರಾದ ಪಂಚತಾರಾ ಹೊಟೇಲ್ ನಲ್ಲಿ ಆಯೋಜಿದ್ದ 18ರ ವಯೋಮಾನದೊಳಗಿನ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ, ಹುಬ್ಬಳ್ಳಿಯ ಸೆಕ್ರೆಡ್ ಹಾರ್ಟ್ ಕಾನ್ವೆಂಟ್ ಸ್ಕೂಲ್ ವಿದ್ಯಾರ್ಥಿನಿ ಡಿಂಪಲ್ ಕೋರ್ಡೆ ಮಿಸ್ ಟೀನ್ ಕರ್ನಾಟಕ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ರಾಷ್ಟ್ರ ರಾಜಧಾನಿ ದೆಹಲಿಯ ಪಂಚತಾರಾ ಹೊಟೇಲ್ ನಲ್ಲಿ 5 ದಿನ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ದೇಶದ ಗೋವಾ, ಮಹಾರಾಷ್ಟ್ರ, ಕರ್ನಾಟಕ, ಗುಜಾರಾತ, ಪಶ್ಚಿಮ ಬಂಗಾಳ, ಕೇರಳ, ಮಿಜೋರಾಮ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 200 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಂತಿಮ ಫ್ಯಾಷನ್ ಶೋದಲ್ಲಿ 72 ಸ್ಪರ್ಧಿಗಳು ಕಣದಲ್ಲಿದ್ದರು.
ಕರ್ನಾಟಕದಿಂದ ಹುಬ್ಬಳ್ಳಿ , ಬೆಂಗಳೂರು, ಕಲಬುರಗಿ ಸೇರಿದಂತೆ ಒಟ್ಟು 9 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ಕೇರಳ ಸ್ಪರ್ಧಿ ಮಿಸ್ ಟೀನ್ ಇಂಡಿಯಾ ಹಾಗೂ ಡಿಂಪಲ್ ಕೋರ್ಡೆ ಮಿಸ್ಟೀನ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಈ ಫ್ಯಾಷನ್ ಶೋ ದಲ್ಲಿ ದೇಶದ ಖ್ಯಾತ ವಸ್ತ್ರವಿನ್ಯಾಸಕರು ಸೇರಿದಂತೆ ವಿವಿಧ ಸ್ತರಗಳ ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸ್ಮೈಲ್ ಕೇರ್ ಗ್ರೂಪ್ ನ ಪಾಲುದಾರ ಡಾ. ಸಾಗರ, ಡಿಂಪಲ್ ಕೋರ್ಡೆಗೆ ಮಿಸ್ಟೀನ್ ಕರ್ನಾಟಕ ಪ್ರಶಸ್ತಿ ಪ್ರಧಾನ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/06/2022 08:16 pm