ನವಲಗುಂದ : ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕ ಸಂಘದ 5ನೇ ಮಹಾ ಸಮ್ಮೇಳನ-2022 ಜೂನ್ 19 ರಂದು ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಲಿರುವ ನಿಮಿತ್ತ ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ ಅವರಿಂದ ನವಲಗುಂದದ ಆಟೋ ರಿಕ್ಷಾ ಚಾಲಕರಿಗೆ ಆಹ್ವಾನ ಪತ್ರವನ್ನು ನೀಡಲಾಯಿತು.
ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಶೇಖರಯ್ಯ ಮಠಪತಿ ಅವರಿಗೆ ನವಲಗುಂದ ಆಟೋ ರಿಕ್ಷಾ ಚಾಲಕರಿಂದ ಇದೆ ವೇಳೆ ಸನ್ಮಾನಿಸಲಾಯಿತು. ಈ ವೇಳೆ ನವಲಗುಂದದ ಆಟೋ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
Kshetra Samachara
17/06/2022 03:03 pm