ಹುಬ್ಬಳ್ಳಿ: ವಿಶ್ವ ಪರಿಸರ ದಿನದ ಅಂಗವಾಗಿ, ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪರಿಸರ ಜಾಗೃತಿ ಜಾಥಾ ನಡೆಸಿದರು.
ಕುಸುಗಲ್ ರಸ್ತೆಯಲ್ಲಿನ ಸಂಸ್ಕಾರ ಶಾಲೆಯಿಂದ ಆರಂಭವಾದ ಜಾಥಾ ಕೇಶ್ವಾಪುರ ಸರ್ವೋದಯ ಸರ್ಕಲ್ ನಲ್ಲಿ ಸಮಾವೇಶಗೊಂಡಿತು. ಅಲ್ಲದೇ ಮಕ್ಕಳು ಪರಿಸರ ನಾಟಕ ಪ್ರದರ್ಶನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಗಿಡಮರಗಳನ್ನು ಬೆಳೆಸಬೇಕು. ಪರಿಸರ ರಕ್ಷಣೆ ಮಾಡಬೇಕು. ಕಾಡು, ಪ್ರಾಣಿ ಸಂಕುಲ ರಕ್ಷಿಸಬೇಕು ಎಂದು ಘೋಷಣೆ ಕೂಗಿದರು. ಮಧ್ಯಾಹ್ನದ ಉರಿ ಬಿಸಿಲನ್ನೂ ಲೆಕ್ಕಿಸದೇ ಶಿಸ್ತುಬದ್ಧವಾಗಿ ಘೋಷಣೆ ಕೂಗುತ್ತಾ ಪಥ ಸಂಚಲನ ಮಾಡಿದ್ದು ಸಾರ್ವಜನಿಕರ ಗಮನ ಸೆಳೆಯಿತು.
Kshetra Samachara
06/06/2022 03:53 pm