ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಮೇ.14 & 15 ರಂದು ಸಾಂಗಲಿ ಚಲೋ ಕಾರ್ಯಕ್ರಮ

ಹುಬ್ಬಳ್ಳಿ: ದಕ್ಷಿಣ ಭಾರತದ ಜೈನ್ ಸಭಾದ 100ನೇ ಅಧಿವೇಶನ (ತ್ರೈವಾರ್ಷಿಕ) ಮೇ.14 & 15 ರಂದು ಸಾಂಗಲಿಯ ನೇಮಿನಾಥ್ ನಗರದ ಕಲ್ಪದ್ರಮ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಭಾದ ಉಪಾಧ್ಯಕ್ಷ ದತ್ತಾ ಡೋರ್ಲೆ ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, 122 ವರ್ಷ ಪೂರ್ವದಲ್ಲಿ ನಮ್ಮ ಜೈನ್ ಸಮಾಜ ಎಲ್ಲ ಕ್ಷೇತ್ರದಲ್ಲಿ ಹಿಂದೂಳಿದಿತ್ತು. ಇಂತಹ ಸಂದರ್ಭದಲ್ಲಿ ದಕ್ಷಿಣ ಭಾರತ ಜೈನ ಸಭೆಯು ಸಮಾಜಕ್ಕೆ ಸ್ವಾಭಿಮಾನದಿಂದ ನಡೆಯಲು ಅನುಕೂಲ ಮಾಡಿಕೊಟ್ಟಿತು. ಸಂಘಟನಾತ್ಮಕ, ಒಗ್ಗಟ್ಟಿನಿಂದ ಮೂಲಭೂತ ಸ್ವರೂಪದ ಕೆಲಸ ಕಾರ್ಯಗಳನ್ನು ಮಾಡುತ್ತ ಸಮಾಜದ ಅಸ್ತಿತ್ವವನ್ನು ತೋರಿಸಿಕೊಡಲಾಗುತ್ತಿದೆ. ಅದರಂತೆ ಮೂರು ವರ್ಷಗಳಿಗೊಮ್ಮೆ ನಡೆಯುವ ಜೈನ್ ಸಭಾ ಅಧಿವೇಶನವನ್ನು ಇದೀಗ ಸಾಂಗಲಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಜೈನ್ ಸಮಾಜವನ್ನು ಸಂಘಟಿಸುವುದು, ಸಮಾಜವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ನಡೆಸಲಾಗುವುದು ಎಂದರು.

Edited By : Manjunath H D
Kshetra Samachara

Kshetra Samachara

05/05/2022 03:39 pm

Cinque Terre

12.66 K

Cinque Terre

0

ಸಂಬಂಧಿತ ಸುದ್ದಿ