ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಸವಣ್ಣನ ಜಾತ್ರೆ ವಿಶೇಷ ಹೆಣ್ಣುಮಕ್ಕಳಿಂದಲೇ ರಥೋತ್ಸವ

ಕುಂದಗೋಳ: ವಿಶೇಷತೆಯಲ್ಲೇ ವಿಶೇಷ ಎಂಬಂತೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅತಿ ಅದ್ದೂರಿಯಾಗಿ ನೆರವೇರಿತು.

ಈ ಕಡಪಟ್ಟಿ ಗ್ರಾಮದ ಬಸವೇಶ್ವರನಿಗೆ ಜಾತ್ರೆ ನಿಮಿತ್ತವಾಗಿ ಬೆಳಿಗ್ಗೆ ಪೂಜಾಭಿಷೇಕ ನೆರವೇರಿಸಿ, ಬಳಿಕ ರೈತರು ಜನ ಮನ ಸೊಜಿಗ ಎಂಬಂತೆ ಆರ್ಕೆಸ್ಟ್ರಾ ಹಾಡುಗಳು ಮದ್ಯ ಜೋಡೆತ್ತುಗಳ ಮೆರವಣಿಗೆ ಸಂಪೂರ್ಣ ಕಡಪಟ್ಟಿ ಗ್ರಾಮದಲ್ಲಿ ಸಂಚರಿಸಿ ಭಕ್ತಿ ಸಾಕ್ಷಾತ್ಕಾರವನ್ನು ಪ್ರಸರಿಸಿತು. ಈ ವೇಳೆ ಆಕ್ರೆಸ್ಟ್ರಾ ಹಾಡುಗಳಿಗೆ ಯುವಕರು ಹಾಕಿದ ಟಪ್ಪಾ ಗುಚ್ಚಿ ಸ್ಟೆಪ್ಸ್ ಮನರಂಜನೆ ಎನಿಸಿದವು.

ಇನ್ನೂ ಸಾಯಂಕಾಲ ನಡೆದ ಬಸವೇಶ್ವರನ ನೂತನ ರಥೋತ್ಸವ ಒಂದು ರೀತಿಯಲ್ಲಿ ವೈಶಿಷ್ಟ ಗ್ರಾಮದ ಹೆಣ್ಣು ಮಕ್ಕಳು ರಥವನ್ನು ಎಳೆಯುವುದು ಇಲ್ಲಿನ ಸಂಪ್ರದಾಯ, ಅದರಂತೆ ಪಕ್ಕದ ಅಲ್ಲಾಪೂರ ಗ್ರಾಮದ ಉಚ್ಚಯಾ ಮೆರವಣಿಗೆ ಆ ರಥೋತ್ಸವಕ್ಕೆ ಆಗಮಿಸಿ ಶಕ್ತಿ ತುಂಬಿದ ಮೇಲೆ ರಥ ಹೊರಡುವುದು ಆ ರಥೋತ್ಸವ ಯಶಸ್ವಿಯಾಗಿ ನಡೆಯಿತು.

Edited By : Shivu K
Kshetra Samachara

Kshetra Samachara

04/05/2022 10:07 am

Cinque Terre

29.84 K

Cinque Terre

0

ಸಂಬಂಧಿತ ಸುದ್ದಿ