ಧಾರವಾಡ : ಬಸವ ಜಯಂತಿಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಳ್ಳಿಗರ ಸಡಗರ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು.
ಹೌದು ಧಾರವಾಡ ಜಿಲ್ಲೆ ಮನಸೂರ ಗ್ರಾಮದಲ್ಲಿ ಇಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಮದುವಣಗಿತ್ತಿಯಂತೆ ಶೃಂಗಾರಗೊಂಡ ಎತ್ತುಗಳು, ಸಾಲು ಸಾಲು ಚಕ್ಕಡಿಗಳು, ಚಕ್ಕಡಿಗಳ ಮುಂದೆ ಡೊಳ್ಳಿನ ನಾದ, ಚಕ್ಕಡಿ ಮೇಲೆ ಬಸವಣ್ಣನವರ ಭಾವಚಿತ್ರ ಇಟ್ಟುಕೊಂಡು ಮೆರವಣಿಗೆ ಹೊರಟ ದೃಶ್ಯ ಅಮೋಘವಾಗಿದೆ.
ಇನ್ನು ಗ್ರಾಮದವರು, ಗುರುಹಿರಿಯರು, ಯುವಕರು ಸೇರಿಕೊಂಡು ಊರ ತುಂಬ ಚಕ್ಕಡಿಯಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
Kshetra Samachara
03/05/2022 06:55 pm