ನವಲಗುಂದ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನವಲಗುಂದ ತಾಲ್ಲೂಕಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್-04 ರಲ್ಲಿ ಜರುಗಿತು.
ಇನ್ನು ಕಾರ್ಯಕ್ರಮವನ್ನು ತಾಲೂಕ ದಂಡಾಧಿಕಾರಿ ಅನಿಲ ಬಡಿಗೇರ ಅವರು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ನಾಡಿನ ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ಪ್ರಸರಣ ಕಾರ್ಯವನ್ನು ಶತಮಾನಗಳಿಂದ ಮಾಡುತ್ತ ಬಂದಿರುವ ಮಹೋನ್ನತ ಸಂಸ್ಥೆ ಎಂದರು.
ಧಾರವಾಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್ ಕೌಜಲಗಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞೆವಿಧಿ ಬೋಧಿಸಿದರು. ಹಾಗೂ ನವಲಗುಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತ ನೂತನ ಅಧ್ಯಕ್ಷರಾಗಿ ಎಸ್.ಎಮ್ ಮೆಣಸಿನಕಾಯಿ, ಗೌರವ ಕಾರ್ಯದರ್ಶಿಯಾಗಿ ಭೀಮರಾಶಿ ಹೂಗಾರ, ಎಸ್.ಎ ನವೀಂದ್ರಕರ್, ಕೋಶಾಧ್ಯಕ್ಷರಾಗಿ ಎಸ್.ಜಿ ಹಿರೇಮಠ ಅಧಿಕಾರ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಎಸ್ ಮಾಯಾಚಾರ್ಯ, ಪುರಸಭೆಯ ಮುಖ್ಯ ಅಧಿಕಾರಿಗಳಾದ ವೀರಪ್ಪ ಹಸಬಿ, ನವಲಗುಂದ ತಾಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎ ಬಿ ಕೊಪ್ಪದ, ವಾಯ್ ಎಚ್ ಬಣವಿ, ಶಂಕ್ರಣ್ಣ ತೋಟದ, ಎಸ್ ಎಚ್ ಹರಕುಣಿ, ಎಸ್ ಎಪ್ ನೀರಲಗಿ, ಲಿಂಗರಾಜ ಕಮತ ಶ್ರೀನಾಥ್ ಜೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
30/04/2022 11:41 am