ಧಾರವಾಡ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಇಂದು ದೇಶಾದ್ಯಂತ ಆಚರಣೆ ಮಾಡಲಾಯಿತು. ಧಾರವಾಡ ಜುಬ್ಲಿ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಡಾ.ಅಂಬೇಡ್ಕರ್ ಅವರ ಜಯಂತ್ಯುತ್ಸವದ ಮೆರವಣಿಗೆ ಉದ್ದಕ್ಕೂ ಡಿಸಿ ಸಾಂಗ್‌ಗೆ ಯುವಕರು ಸ್ಟೆಪ್ ಹಾಕಿದರು. ಅಲ್ಲದೆ ಯುವಕರು ಕೈಯಲ್ಲಿ ಜೈ ಭೀಮ ಧ್ವಜದ ಭಾವಟ ಹಾರಿಸುತ್ತಾ ಸಂಭ್ರಮದಿಂದ ಜಯಂತಿ ಆಚರಣೆ ನಡೆಸಿದರು.
ಡಾ. ಬಾಬಾ ಸಾಹೇಬ್ ಅವರ ಜಯಂತ್ಯುತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಯುವಕರು ನಗರದ ಸುಭಾಷ್ ವೃತ್ತದಲ್ಲಿ ಒಂದು ಗಂಟೆಗಳ ಕಾಲ ಡಿಜೆ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿ ಸಂತಸಪಟ್ಟರು.
Kshetra Samachara
14/04/2022 09:32 pm