ಹುಬ್ಬಳ್ಳಿ: ನಗರದ ಆಟಿಟ್ಯೂಡ್ ವುಮೆನ್ಸ್ ಫೌಂಡೇಶನ್ ವತಿಯಿಂದ ಕಿಡ್ಸ್ ಆ್ಯಂಡ್ ವುಮೆನ್ಸ್ ಹಬ್ ಅನ್ನು ಏ.17 ರಂದು ಬೆಳಿಗ್ಗೆ 9:30 ಕ್ಕೆ ಅಶೋಕನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ರಾಜೇಶ್ವರಿ ಬಗಲಿ ಹೇಳಿದರು.
ನಗರದಲ್ಲಿಂದು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಫೌಂಡೇಶನ್ ವತಿಯಿಂದ ಮೊದಲ ಬಾರಿಗೆ ಮಕ್ಕಳು ಹಾಗೂ ಮಹಿಳೆಯರಿಗೆ ಸೀರೆ ಓಟ, ರಂಗೋಲಿ ಸ್ಪರ್ಧೆ, ಚಿತ್ರಕಲೆ, ನೃತ್ಯ, ರಾಣಿ ಮಹಾರಾಣಿ ಸೇರಿದಂತೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಂಡು ಕುಲಕರ್ಣಿ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ್, ಸಮಾಜ ಸೇವಕ ಸಂತೋಷ ಶೆಟ್ಟಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಹೂಡಾ ಅಧ್ಯಕ್ಷ ನಾಗೇಶ ಕಲಬುರಗಿ, ಮಾಜಿ ಪಾಲಿಕೆ ಸದಸ್ಯೆ ದೀಪಾ ಗೌರಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಆಸಕ್ತರು ಭಾಗವಹಿಸಬಹುದು ಎಂದು ತಿಳಿಸಿದರು.
Kshetra Samachara
09/04/2022 02:13 pm