ಕುಂದಗೋಳ: ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಹೋಳಿ ಹುಣ್ಣಿಮೆ ಸಂಭ್ರಮ ಈ ವರ್ಷ ದುಪ್ಪಟ್ಟಾಗಿದೆ, ಅದರಂತೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಎಲ್ಲೇಡೆಗಿಂತ ಒಂದು ದಿನ ಮೊದಲೇ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ ಇಂದು ದಹನ ಮಾಡಲಾಯಿತು.
ಪ್ರತಿ ವರ್ಷದಂತೆ ಒಂದು ದಿನ ಮೊದಲೇ ಹೋಳಿ ಹುಣ್ಣಿಮೆ ಆಚರಿಸುವ ಅಲ್ಲಾಪೂರ ಗ್ರಾಮಸ್ಥರು ಅತಿ ಸಂಪ್ರದಾಯ ಬದ್ಧವಾಗಿ ಈ ವರ್ಷ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿ ಇಂದು ದಹನ ಮಾಡಿದರು.
ಕಾಮದಹನ ಆಗುವುದೇ ತಡ ಯುವಕರು, ನಾಗರೀಕರು ಮಕ್ಕಳು ಹೋಳಿ ಸಂಭ್ರಮದಲ್ಲಿ ಮಿಂದೆದ್ದು, ಡಿಜೆ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಾ ಕಳೆದೆರಡು ವರ್ಷಗಳಿಂದ ಕಳೆದುಕೊಂಡ ಹೋಳಿ ಹುಣ್ಣಿಮೆ ಸಂಭ್ರಮಾಚರಣೆಯನ್ನು ಅತಿ ವಿಶೇಷವಾಗಿ ಆನಂದಿಸಿದರು.
Kshetra Samachara
17/03/2022 08:29 pm