ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ನವಲಗುಂದ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ನವಲಗುಂದ ಪಟ್ಟಣದ ಪರಿವಿಕ್ಷಣ ಮಂದಿರದಲ್ಲಿ ಜಿಲ್ಲಾ ಸಂಚಾಲಕರು ಮಂಜುನಾಥ ಕಿನಕೇರಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಾದೇವ ಬಾಗೂರು ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ತಾಲೂಕು ಸಂಚಾಲಕರಾಗಿ ನಿಂಗಪ್ಪ ಕೆಳಗೇರಿಯವರು ಮರು ಆಯ್ಕೆಯಾದರು. ತಾಲೂಕು ಸಂಘಟನಾ ಸಂಚಾಲಕರುಗಳಾಗಿ ರವಿ ಹುನಶಿಮರದ, ಷಣ್ಮುಖ ಪೂಜಾರ, ಮಹಮ್ಮದ್ ಮಟ್ಟಿಗೇರ, ಯಲ್ಲಪ್ಪ ಮಾದರ, ಕರಿಯಪ್ಪ ಚಲವಾದಿ, ತಿಪ್ಪಣ್ಣ ಹುಚ್ಚಣ್ಣವರ, ಅಮರಪ್ಪ ಅಮ್ಮಣ್ಣವರ, ಹಣಮಂತ ಮಾದರ, ದುರಗಪ್ಪ ಮಾದರ ಆಯ್ಕೆಯಾದರು. ಇನ್ನು ತಾಲೂಕು ಸಮಿತಿ ಸದಸ್ಯರಾಗಿ ಚಂದಪ್ಪ ಚಲವಾದಿ, ಮುದಕಪ್ಪ ಮಾದರ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಲಘಟಗಿ ತಾಲೂಕು ಸಂಚಾಲಕರು ಮಂಜುನಾಥ್ ಮಾದರ, ಅಣ್ಣಿಗೇರಿ ಸಂಚಾಲಕರು ಕುಮಾರ ಸೈದಾಪುರ, ಯಲ್ಲಪ್ಪ ಮಾದರ, ಬಸವರಾಜ್ ಬನ್ನಿಗಿಡದ ಹಾಗೂ ನವಲಗುಂದ ತಾಲೂಕಿನ ಗ್ರಾಮಗಳ ಗ್ರಾಮ ಶಾಖೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/03/2022 06:00 pm

Cinque Terre

19.22 K

Cinque Terre

0

ಸಂಬಂಧಿತ ಸುದ್ದಿ