ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಂಗೋಲಿಯಲ್ಲಿ ಮೂಡಿತು ಜ್ಞಾನ-ವಿಜ್ಞಾನ

ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಂಗೋಲಿಯಲ್ಲಿ ಮಾನವ ದೇಹದ ಅಂಗಾಂಗಳನ್ನು ಮೂಡಿಸಿದ್ದಾರೆ. ಮಕ್ಕಳ ಈ ವಿನೂತನ ಸೃಜನಶೀಲ ಪ್ರಯತ್ನಕ್ಕೆ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ರಂಗೋಲಿ ಮೂಲಕ ಬಿಡಿಸಲಾದ ಚಿತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಹ ಬರವಣಿಗೆ ಮೂಲಕ ತಿಳಿಸಲಾಗಿತ್ತು. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ರಂಗೋಲಿ ಚಿತ್ರಗಳನ್ನು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸಂಗೀತ ರೆಡ್ಡಿ (ವಿಜ್ಞಾನ ), ಶಹನಾಬಾನು ಪಾಠನಿ (ಎಚ್ ಎಮ್), ಶಾಲೆಯ ವಿದ್ಯಾರ್ಥಿಗಳಾದ ಚೈತ್ರಾ ಅಂಗಡಿ, ಚೈತ್ರಾ ಬೆಣ್ಣಿ, ಸುನೀತಾ ಬೈರಿಕೊಪ್ಪ, ಸೇರಿದಂತೆ ಅನೇಕ ಮಕ್ಕಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

19/02/2022 12:47 pm

Cinque Terre

34.33 K

Cinque Terre

5

ಸಂಬಂಧಿತ ಸುದ್ದಿ