ಧಾರವಾಡ: ಇತ್ತೀಚಿಗೆ ರಾಜ್ಯದಲ್ಲಿ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ವೈಜ್ಞಾನಿಕ- ಧರ್ಮನಿರಪೇಕ್ಷ- ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ. ಮಹಾನ್ ನೇತಾಜಿ ಹಾಗೂ ಭಗತ್ ಸಿಂಗ್‌ರ ಕನಸುಗಳನ್ನು ನನಸಾಗಿಸಲು AIDSO ರಾಜ್ಯ ಸಮಿತಿಯು ಧಾರವಾಡದಲ್ಲಿ ಒಂದು ವಿನೂತನ ಮಾದರಿಯ ಪ್ರಚಾರ ಕೈಗೊಂಡಿದೆ.
ಧಾರವಾಡವು ಸೇರಿದಂತೆ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗೋಡೆ ಬರಹಗಳ ಮೂಲಕ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ವೈಜ್ಞಾನಿಕ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಲಾಗಿದೆ. 'ಶಿಕ್ಷಣ ಹಾಗೂ ರಾಜಕೀಯದಲ್ಲಿ ಧರ್ಮ ಬರಬಾರದು', 'ಸಾಮಾಜಿಕ ಕಾನೂನುಗಳನ್ನು ರೂಪಿಸುವಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ' ಎಂಬ ಮುಂತಾದ ಕೋಮುಸಾಮರಸ್ಯದ ಕುರಿತು ಸ್ವಾಮಿ ವಿವೇಕಾನಂದ, ಕುವೆಂಪು, ಭಗತ್ ಸಿಂಗ್, ನೇತಾಜಿ ಮುಂತಾದ ಮಹಾನ್ ವ್ಯಕ್ತಿಗಳ ಸೂಕ್ತಿಗಳ ಗೋಡೆ ಬರಹವನ್ನು ಬರೆಯಲಾಯಿತು.
ಎಲ್ಲೆಡೆಯೂ ವಿದ್ಯಾರ್ಥಿ, ಪೋಷಕರು, ಸೇರಿದಂತೆ ಉಪನ್ಯಾಸಕರಿಂದ ಈ ಮಾದರಿಯ ಪ್ರಯತ್ನಕ್ಕೆ ಸಕಾರಾತ್ಮಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ.
Kshetra Samachara
18/02/2022 08:11 pm