ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ರೇಮಿಗಳ ದಿನಕ್ಕೆ ವಿರೋಧ: ಬದಲಿಗೆ ಹಿರಿಯರ ದಿನ ಆಚರಣೆ

ಧಾರವಾಡ: ಫೆ.14 ಬಂತೆಂದರೆ ಸಾಕು ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ. ಈ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಿಂದ ಬಂದ ಈ ಸಂಸ್ಕೃತಿಯನ್ನು ಇದೀಗ ಭಾರತದಲ್ಲೂ ಮುಂದುವರೆಸಲಾಗುತ್ತಿದೆ. ಈ ಆಚರಣೆಗೆ ಅನೇಕ ಸಂಘಟನೆಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿವೆ.

ಇಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರೇಮಿಗಳ ದಿನ ವಿರೋಧಿಸಿ ಹಿರಿಯರ ಪಾದಪೂಜೆ ಮಾಡುವ ಮೂಲಕ ಹಿರಿಯರ ದಿನವನ್ನು ಆಚರಿಸಿದ್ದಾರೆ.

ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಹಿರಿಯರ ಪಾದಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

ಪ್ರೇಮಿಗಳ ದಿನಕ್ಕೆ ಶ್ರೀರಾಮಸೇನೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅದರ ಬದಲಿಗೆ ಹಿರಿಯರ ಪೂಜೆ ಮಾಡುವ ಪದ್ಧತಿ ಬೆಳೆಸಿಕೊಂಡು ಬರುತ್ತಿದೆ. ಹೀಗಾಗಿ ಪ್ರತಿವರ್ಷ ಫೆ.14 ರಂದು ಶ್ರೀರಾಮ ಸೇನೆ ವತಿಯಿಂದ ಹಿರಿಯರ ದಿನವನ್ನು ಕಡ್ಡಾಯವಾಗಿ ಆಚರಿಸಲು ಶ್ರೀರಾಮಸೇನೆ ಮುಂದಾಗಿದೆ.

Edited By : Nagesh Gaonkar
Kshetra Samachara

Kshetra Samachara

14/02/2022 05:53 pm

Cinque Terre

41.69 K

Cinque Terre

4

ಸಂಬಂಧಿತ ಸುದ್ದಿ