ಕುಂದಗೋಳ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರತ ಹುಣ್ಣಿಮೆ ದಿನದಂದು ನಡೆಯುವ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಎಲ್ಲೇಡೆ ಭಕ್ತರು ಪ್ರಯಾಣ ಬೆಳೆಸುತ್ತಾರೆ.
ಅದರಂತೆ ವಿಶೇಷ ಎಂಬಂತೆ ಇಲ್ಲೋಂದು ಗ್ರಾಮದಲ್ಲಿ ಯುವ ಭಕ್ತರು ಪಾದಯಾತ್ರೆ ಕೈಗೊಂಡು ಉಳವಿ ಜಾತ್ರಾ ಮಹೋತ್ಸವ ಮಾಡಲು ಹೊರಟಿದ್ದಾರೆ, ಹೌದು ! ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಯುವಕರು ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ದರ್ಶನ ಪಡೆಯಲು ಇಂದು ಪ್ರಯಾಣ ಆರಂಭಿಸಿದ್ದಾರೆ.
ಇಂದು ಬೆಳಿಗ್ಗೆ ಅಲ್ಲಾಪೂರ ಗ್ರಾಮದ ಮಾರುತಿ ದೇವಸ್ಥಾನ ಎದುರು ಪೂಜೆ ಕೈಗೊಂಡು ಉಳವಿ ಕ್ಷೇತ್ರಕ್ಕೆ ಭಕ್ತರು ಪ್ರಯಾಣ ಆರಂಭಿಸಿದ್ದಾರೆ.
Kshetra Samachara
12/02/2022 12:08 pm