ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದ ಪ್ರೌಢಶಾಲಾ ಮಕ್ಕಳು ಖ್ಯಾತ ಗಾಯಕಿ ಭಾರತ ರತ್ನ ಪ್ರಶಸ್ತಿ ವಿಜೇತ ಲತಾ ಮಂಗೇಶ್ಕರ್ ಭಾವಚಿತ್ರವನ್ನು ಬಿಡಿಸುವುದರೊಂದಿಗೆ ಅವರ ನಿಧನಕ್ಕೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು.
ದೇಶದ ಪ್ರತಿಯೊಂದು ಭಾಷೆಯಲ್ಲಿಯೂ ಮೂವತ್ತು ಸಾವಿರಕ್ಕೂ ಹೆಚ್ಚು ಹಾಡುಗಳು ಹಾಡಿ ಜನ ಮನ ಗೆದ್ದ ಭಾರತದ ಗೋಗಿಲೆ ಎಂದು ಪ್ರಖ್ಯಾತ ಪಡೆದವರು ಎಂದು ಶಿಕ್ಷಕರಾದ ನಾಗಪ್ಪ ಮನ್ನಿಕೇರಿ ಮಾತನಾಡಿದರು. ಕನ್ನಡದ ಚಿತ್ರ ದ ಗೀತೆಯನ್ನು ಲತಾ ಮಂಗೇಶ್ಕರ್ ಹಾಡಿದನ್ನು ಚಿತ್ರ ಕಲಾ ಶಿಕ್ಷಕರಾದ ಶೀಕಂದರ್ ಹೊಸಳ್ಳಿ ನೆನಪಿಸಿಕೊಂಡರು.
ಲತಾ ಮಂಗೇಶ್ಕರ್ ಅವರ ಭಾವ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ವಸ್ತ್ರಕಾಂತಿಮಠ ವಾಣಿ ಲಮಾಣಿ, ಶ್ವೇತಾ ಅಂಗಡಿ, ತನುಜಾ ಎಸ್. ಇವರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳೆಲ್ಲ ಗಾನಗಂಗೆ ಮತ್ತೊಮ್ಮೆ ಅವತರಿಸಿ ಬಾ ಎಂದರು.
ಮುಖ್ಯ ಶಿಕ್ಷಕರಾದ ಕುಮಾರ ಕೆ.ಎಫ್, ವೈದ್ಯರಾದ ಡಾ. ಗೀರಿಜಾ ಪಲ್ಲಕ್ಕಿ, ಶಾಲಾ ಸಿಬ್ಬಂದಿ ಅಶೋಕ ಪಾಟೀಲ, ಹುಲಯಪ್ಪ ಭೋವಿ, ಶಾಂತಲಿಂಗ ಬೇರುಡಗಿ, ಲಕ್ಷ್ಮಣ ಲಮಾಣಿ ರತ್ನಾ ಹೆಗಡೆ ಇದ್ದರು.
Kshetra Samachara
07/02/2022 10:14 pm