ಹುಬ್ಬಳ್ಳಿ: ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ ಅವರನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನ ಆಡಳಿತ ಮಂಡಳಿ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.
ಪದ್ಮಶ್ರೀ ಪುರಸ್ಕಾರ ಪಡೆದಿರುವ ಅಬ್ದುಲ್ ಖಾದರ್ ನಡಕಟ್ಟಿನ ಅವರು 1972ರಲ್ಲಿ ಹುಬ್ಬಳ್ಳಿಯ ವಿದ್ಯಾನಗರದ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷ ವ್ಯಾಸಂಗ ಮಾಡಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ನಡಕಟ್ಟಿನ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ಅಣ್ಣಿಗೇರಿ ಪಟ್ಟಣದ ರೈತಾಪಿ ಕುಟುಂಬದಿಂದ ಬಂದ ಇವರು ತಮ್ಮದೇ ಆದ ವಿಶೇಷತೆಯ ಕೂರಿಗೆ ಯಂತ್ರಗಳನ್ನು ಸಿದ್ಧಪಡಿಸಿ ಈ ಯಂತ್ರಗಳಿಂದಲೇ ನಡಕಟ್ಟಿನ ಅವರಿಗೆ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಮೂಲತಃ ಕೃಷಿ ಕುಟುಂಬದಲ್ಲೇ ಹುಟ್ಟಿದ್ದ ಅಬ್ದುಲ್ ಖಾದರ್ ರೈತರಿಗೆ ಏನಾದರೂ ವಿಶೇಷವಾಗಿ ಮತ್ತು ಅತಿವೇಗವಾಗಿ ಉಳುಮೆ ಮಾಡುವ ಯಂತ್ರವನ್ನು ಕಂಡು ಹಿಡಿಯಬೇಕು ಎಂಬುವಂತ ನಿರಂತರ ಪ್ರಯತ್ನದಿಂದ ಕೂರಿಗೆ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಇವರ ಸಾಧನೆಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
01/02/2022 07:32 pm