ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿಯರು

ಧಾರವಾಡ: ಆಧುನಿಕತೆ ಭರಾಟೆಯಲ್ಲಿ ನಾವು ಎಲ್ಲವನ್ನೂ ಮರೆಯುತ್ತಿದ್ದೇವೆ. ಸಾಂಪ್ರದಾಯಿಕ ಉಡುಗೆಗಳಿಗೆ ಗುಡ್ ಬೈ ಹೇಳಿದ್ದೇವೆ. ಆದರೆ, ಅಲ್ಲಲ್ಲಿ ಸಾಂಪ್ರದಾಯಿಕ ಬಟ್ಟೆಗಳು ಇನ್ನೂ ಜೀವಂತವಾಗಿವೆ. ನಗರ ಪ್ರದೇಶ ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಆಚರಣೆಗಳು ಇನ್ನೂ ಜೀವಂತವಾಗಿ ಮುನ್ನಡೆದುಕೊಂಡು ಹೋಗುತ್ತಿವೆ.

ವಿದ್ಯಾರ್ಥಿಗಳು ತಮ್ಮ ಕಾಲೇಜು ಉಡುಗೆ ಬಿಟ್ಟು ಹಬ್ಬದ ದಿನದಂದಾದರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸಂಭ್ರಮಿಸಲಿ ಎಂದು ಧಾರವಾಡದ ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಸಾರಿ ಡೇ ಹಮ್ಮಿಕೊಳ್ಳಲಾಗಿತ್ತು.

ಈ ದಿನದಂದು ವಿದ್ಯಾರ್ಥಿನಿಯರು ಇಳಕಲ್ ಸೀರೆ, ರೇಷ್ಮೆ ಸೀರೆ, ಮಸರಾಯಿ ಸೀರೆ ಸೇರಿದಂತೆ ಇತರ ಸಾಂಪ್ರದಾಯಿಕ ಸೀರೆಗಳನ್ನುಟ್ಟು ಸಂಭ್ರಮಿಸಿದರು. ಕಾಲೇಜಿನ ಮಹಿಳಾ ಸಿಬ್ಬಂದಿ ಕೂಡ ಸಾಂಪ್ರದಾಯಿಕ ಸೀರೆ ಉಟ್ಟು ವಿದ್ಯಾರ್ಥಿನಿಯರನ್ನು ಹುರುದುಂಬಿಸಿದರು. ಒಟ್ಟಾರೆಯಾಗಿ ಈ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಸಂಪ್ರದಾಯಬದ್ಧವಾಗಿ ಸಂಕ್ರಾಂತಿ ಆಚರಿಸಿದ್ದು ಸುಳ್ಳಲ್ಲ.

Edited By : Shivu K
Kshetra Samachara

Kshetra Samachara

20/01/2022 12:16 pm

Cinque Terre

29.41 K

Cinque Terre

0

ಸಂಬಂಧಿತ ಸುದ್ದಿ