ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮರಳಿನಲ್ಲಿ ಮೂಡಿದ ವಿಶ್ವ ಸಂತ

ಧಾರವಾಡ: ವಿಶ್ವ ಸಂತ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಧಾರವಾಡದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗಿದೆ.

ಸುಮಾರು ಆರು ಅಡಿ ಎತ್ತರದ ಮರಳು ರಾಶಿಯಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿ, ಗಮನಸೆಳೆದರು.

ಧಾರವಾಡದ ದೊಡ್ಡನಾಯಕನಕೊಪ್ಪದಲ್ಲಿ ಜನಜಾಗೃತಿ ಸಂಘ, ಬೇಂದ್ರೆ ನಗರ ಹಾಗೂ ಸಂಪಿಗೆನಗರ ನಿವಾಸಿಗಳು ಕೂಡಿಕೊಂಡು ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.

ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚನೆ ಮಾಡಿ ಅದಕ್ಕೆ ಬಣ್ಣ ಹಾಕಿ ಗಮನಸೆಳೆದರು. ನಿವಾಸಿಗಳೆಲ್ಲರೂ ಸೇರಿಕೊಂಡು ವಿಶ್ವ ಸಂತನ ಕಲಾಕೃತಿಗೆ ಪೂಜೆ ಸಲ್ಲಿಸಿ, ವಿವೇಕಾನಂದರ ಜನ್ಮ ದಿನವನ್ನು ಆಚರಿಸಿದರು.

Edited By : Manjunath H D
Kshetra Samachara

Kshetra Samachara

12/01/2022 05:09 pm

Cinque Terre

30.92 K

Cinque Terre

1

ಸಂಬಂಧಿತ ಸುದ್ದಿ