ಕುಂದಗೋಳ : ಇತ್ತಿಚೆಗೆ ಪ್ರಕೃತಿ ಮುನಿಸೋ ಆಧುನಿಕತೆ ಶಾಪವೋ ಗೊತ್ತಿಲ್ಲಾ, ಪ್ರಕೃತಿಯಲ್ಲಿ ವಿಪ್ಪತ್ತುಗಳು ಹೆಚ್ಚಾಗಿವೆ, ಈ ವಿಪತ್ತು ನಿರ್ವಹಣೆಗೆ ಹತೋಟಿಗೆಂದು ಇಲ್ಲೊಂದು ಸಂಸ್ಥೆ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ತರಬೇತಿ ಕೈಗೊಂಡಿದೆ.
ಹೌದು ! ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿ ಸ್ವಯಂ ಸೇವಕರಿಗೆ ಪ್ರೇರಣಾತ್ಮಕ ಭಾಷಣದ ಮೂಲಕ ಸ್ವಯಂ ಸೇವೆಗೆ ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ ಪ್ಯಾಸ್, ಮಾತನಾಡಿದರೇ ಅಭಿನವ ಕಲ್ಯಾಣಪುರ ಬಸವಣ್ಣನವರು ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ಸರ್ವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಾಡಗೀತೆ ಹೇಳುವ ಮೂಲಕ ಕಾರ್ಯಕ್ರಮ ಕೈಗೊಂಡು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ತಮ್ಮ ಭಾಷಣವನ್ನು ಸ್ವಯಂ ಸೇವಕರಿಗೆ ತಿಳಿಸಿದರು. ನೂತನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜಣ್ಣ ಕೊರವಿ,ಡಾ.ಎಲ್.ಎಚ್.ಮಂಜುನಾಥ್, ವಿವೇಕ್ ಪ್ಯಾಸ್, ಜಿ.ಎಸ್.ತೋರಣಗಟ್ಟಿ, ಶಿವಾನಂದ ಬೆಂತೂರು, ರಘುನಾಥಗೌಡ್ರು ಕೆಂಪಲಿಂಗನಗೌಡ್ರು, ದೆವೇಂದ್ರಪ್ಪ ಕಾಗೆನವರ, ಚೈತ್ರಾ ಗುರುಪಾದಪ್ಪ ಶಿರೂರು, ರಮೇಶ್ ಮೊರಬದ, ನೇತ್ರಾ ಎಮ್.ಎಚ್.ಉಪಸ್ಥಿತರಿದ್ದರು.
Kshetra Samachara
11/01/2022 03:08 pm