ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬದುಕಿನ ಮಾರ್ಗ ತೋರಿದ ಗುರುವಿಗೆ ಹೂಮಳೆ ಗೈದು ವಂದನೆ

ಕುಂದಗೋಳ : ಹರ ಮುನಿದರೂ ಗುರು ಕಾಯುವ ಎಂಬ ಮಾತಿನಂತೆ ಗುರು ನೀಡಿದ ಶಿಕ್ಷಣ, ಸಹಕಾರ, ಸಹಾಯ ಮಾರ್ಗದರ್ಶನದಿಂದ ಉತ್ತಮ ಬದುಕು ರೂಪಿಸಿಕೊಂಡ ಹಳೇ ವಿದ್ಯಾರ್ಥಿಗಳು ಗುರುವಿಗೆ ಹೂ ಮಳೆ ಸುರಿದಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ಹರಭಟ್ಟ ಪದವಿ ಪೂರ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೇ ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತು ಸೇವೆ ಸಹಕಾರ ನೀಡಿ ಮಕ್ಕಳಿಗೆ ಒಂದು ಗುರಿ ತೋರಿಸಿದ ಬಾಪುಗೌಡ ಮುಂದಿನಮನಿ ಯವರಿಗೆ ಹಳೇ ವಿದ್ಯಾರ್ಥಿಗಳ ಸಂಘದವರು ಹೂಮಳೆ ಸುರಿದು ಕಾರ್ಯಕ್ರಮಕ್ಕೆ ಸ್ವಾಗತಿಸಿ ಸರಸ್ವತಿ ಮೂರ್ತಿಯನ್ನು ಉಡಗೂರೆಯಾಗಿ ನೀಡಿ ಗುರುವಂದನೆ ಸಮರ್ಪಿಸಿದರು.

ಈ ಗುರುವಂದನಾ ಕಾರ್ಯಕ್ರಮವನ್ನು ಅಭಿನವ ಕಲ್ಯಾಣಪುರ ಬಸವಣ್ಣನವರು ದೀಪ ಬೆಳಗಿಸಿ ಉದ್ಘಾಟಿಸಿ ಗುರು ಶಿಷ್ಯರ ಬಾಂಧ್ಯವನ್ನು ಕಂಡು ಹಾಡಿ ಹೊಗಳಿದರು, ವಿದ್ಯಾರ್ಥಿಗಳು ತಾವು ಮಾಡಿದ ಸಾಧನೆ ಹಾಗೂ ಗುರುವಿನ ಸಹಕಾರ ಸಹಾಯ ನೆನೆದು ಕಣ್ಣೀರಿಟ್ಟು ಗುರುವೆಂದನೆ ಸಲ್ಲಿಸಿದರು.

Edited By : Nagesh Gaonkar
Kshetra Samachara

Kshetra Samachara

09/12/2021 03:08 pm

Cinque Terre

35.5 K

Cinque Terre

1

ಸಂಬಂಧಿತ ಸುದ್ದಿ