ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಶಾಂತಿನಾಥ ಜೈನ ಬಸದಿಯಲ್ಲಿ ಕಾರ್ತಿಕಮಾಸ ಅಂಗವಾಗಿ ಬೆಳಿಗ್ಗೆ ಭಗವಾನ್ ಶಾಂತಿನಾಥ ತೀರ್ಥಂಕರರಿಗೆ ಪಂಚಾಮೃತಾಭಿಷೇಕ ಸಾಯಂಕಾಲ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಜರಗಿತು.
ಜೈನ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿ ಭಗವಾನ್ ಶಾಂತಿನಾಥರಿಗೆ ಕಾರ್ತಿಕ ನೆರವೇರಿಸಿ ಪುಷ್ಪ ಸಮರ್ಪಿಸಿ ಸ್ವಸ್ತಿಕ್ ಆಕಾರದಲ್ಲಿ ಭಗವಾನ್ ಶಾಂತಿನಾಥರಿಗೆ ಕಾರ್ತಿಕ ಬೆಳಗಿಸಿದರು. ಈ ವೇಳೆ ಜೈನ ಧರ್ಮದ ಶ್ರಾವಕಿ ಶ್ರಾವಕಿಯರು ಹಾಗೂ ಸಾರ್ವಜನಿಕರು ದರ್ಶನ ಪಡೆದು ಪ್ರಸಾದ ಸವಿದು ಪುನೀತರಾದರೇ ಮಕ್ಕಳು ಕಾರ್ತಿಕ ಮಾಸದ ಸಂಭ್ರಮದಲ್ಲಿ ನೃತ್ಯ ಮಾಡಿದರು.
Kshetra Samachara
27/11/2021 11:24 am