ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2023ಕ್ಕೆ ಕಲ್ಯಾಣಪುರ ಮಠಕ್ಕೆ 50ರ ಸಂಭ್ರಮ ನ.28ಕ್ಕೆ ಪೂರ್ವಭಾವಿ ‌ಸಭೆ

ಕುಂದಗೋಳ : ಪಟ್ಟಣದ ಲಿಂಗೈಕ್ಯ ತ್ರಿವಿಧ ದಾಸೋಹಿ ಕಲ್ಯಾಣಪುರ ಬಸವಣ್ಣನಜ್ಜವರು ಶ್ರೀಮಠವನ್ನು ಹುಟ್ಟು ಹಾಕಿ 2023 ಜನೇವರಿ ತಿಂಗಳಿಗೆ ಐವತ್ತು ವರ್ಷ ಪೂರ್ಣಗೊಳಿಸುವ ಹಿನ್ನಲೆಯಲ್ಲಿ, ಇದೇ ತಿಂಗಳು ನವೆಂಬರ್ 28 ರಂದು ರವಿವಾರ 10 ಗಂಟೆಗೆ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಿಲಾಗಿದೆ.

ಆ ನಿಮಿತ್ತ ಕುಂದಗೋಳ ತಾಲೂಕಿನ ಹಾಗೂ ಹೊರಗಿನ ಸಮಸ್ತ ಭಕ್ತರು ಹಾಜರಾಗುವಂತೆ ಅಭಿನವ ಕಲ್ಯಾಣಪುರ ಬಸವಣ್ಣನವರು ತಿಳಿಸಿದರು.

ಕುಂದಗೋಳ ಪಟ್ಟಣದ ಕಲ್ಯಾಣಪುರ ಮಠದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮಠ ಭಕ್ತರ ಹಾರೈಕೆಯಿಂದ ಬೆಳೆಯುತ್ತಾ ಇಂದು 50 ವರ್ಷ ಪೂರೈಸಿದೆ.

ಕುಂದಗೋಳ ತಾಲೂಕಿನ ಹಳ್ಳಿ ಭಕ್ತರು, ಹಾಗೂ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಸಂಘದವರು, ಭಜನಾ ಸಂಘ, ಯುವಕ ಮಂಡಳದವರು, ಅಂಬೇಡ್ಕರ್ ಕಮೀಟಿಯವರು, ಅಕ್ಕನ ಬಳಗದವರು, ಮಹಿಳಾ ಸಂಘದವರು, ಅಂಜುಮಮ್ ಎ ಇಸ್ಲಾಂ ಕಮೀಟಿಯವರು ಭಾಗಿಯಾಗಿ ಕಾರ್ಯಕ್ರಮ ನಡೆಸುವ ರೂಪುರೇಷೆ ತಿಳಿಸಬೇಕೆಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಕೋರಿದ್ದಾರೆ.

Edited By : Shivu K
Kshetra Samachara

Kshetra Samachara

24/11/2021 09:37 pm

Cinque Terre

12.5 K

Cinque Terre

0

ಸಂಬಂಧಿತ ಸುದ್ದಿ