ಕುಂದಗೋಳ : ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕುಂದಗೋಳ ಘಟಕದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಇದೇ ನವೆಂಬರ್ ನ .14 ರಂದು ಭಾನುವಾರ ಆಯೋಜಿಸಿದ್ದ ಮಕ್ಕಳೋತ್ಸವ ಕಾರ್ಯಕ್ರಮ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಮುಂದೂಡಲಾಗಿದೆ ಎಂದು ಮಕ್ಕಳ ಪರಿಷತ್ ತಾಲೂಕಾಧ್ಯಕ್ಷೆ ಮಂಜುಳಾ ಕಾಮಧೇನು ಹೇಳಿದರು.
ಅವರು ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಸಭೆ ಮತ್ತು ಸಮಾರಂಭಗಳನ್ನು ಮಾಡಲು ಅನುಮತಿ ಇಲ್ಲದ ಕಾರಣ ಕುಂದಗೋಳ 'ಸವಾಯಿ ಗಂಧರ್ವರ ಭವನದಲ್ಲಿ ನ.14 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಯಬೇಕಾಗಿದ್ದ ಮಕ್ಕಳೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಿ ಮುಂಬುರುವ ಡಿ.16 ನಂತರ ಮಕ್ಕಳೋತ್ಸವ ಕಾರ್ಯಕ್ರಮದ ದಿನಾಂಕವನ್ನು ಮರು ನಿಗದಿ ಮಾಡಲಿದ್ದೇವೆ ಮತ್ತು ಕುಂದಗೋಳದ 'ಸವಾಯಿ ಗಂಧರ್ವ ಭವಾನದಲ್ಲಿಯೆ ' ಕಾರ್ಯಕ್ರಮ ನಡೆಸಲಿದ್ದೇವೆ ಎಲ್ಲರೂ ಸಹಕರಿಸಬೇಕೆಂದು ಮಕ್ಕಳ ಪರಿಷತ್ ತಾಲೂಕಾಧ್ಯಕ್ಷೆ ಮಂಜುಳಾ ಕಾಮಧೇನು ಹಾಗೂ ಪ್ರಧಾನ ಕಾರ್ಯದರ್ಶಿ ನವೀನಕುಮಾರ ಧರಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Kshetra Samachara
13/11/2021 11:57 am