ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎತ್ತುಗಳ ಮೇಲೆ ರಾರಾಜಿಸಿದ ಅಪ್ಪು ಚಿತ್ರ

ಧಾರವಾಡ: ನಿನ್ನೆ ಹಾಗೂ ಮೊನ್ನೆ ನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದಲ್ಲೂ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಆದರೆ, ಈ ಗ್ರಾಮದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿ, ಈಚೆಗಷ್ಟೇ ನಿಧನರಾದ ನಟ ಪುನೀತ್‌ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಕಲ್ಲಾಪುರ ಗ್ರಾಮದ ರೈತರೊಬ್ಬರು ತಮ್ಮ ಎತ್ತುಗಳ ಮೇಲೆ ನಟ ಪುನೀತ್‌ ರಾಜಕುಮಾರ ಅವರ ಚಿತ್ರ ಬಿಡಿಸಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಆ ಎತ್ತುಗಳನ್ನು ಊರತುಂಬ ಮೆರವಣಿಗೆ ಕೂಡ ಮಾಡಿದ್ದಾರೆ.

ದೇವೇಂದ್ರ ಅಪ್ಪೂರಿ ಎಂಬ ಕಲಾವಿದ ಎತ್ತುಗಳ ಮೇಲೆ ಅಪ್ಪು ಅವರ ಭಾವಚಿತ್ರ ಬಿಡಿಸಿದ್ದರು. ಕೆಲವೊಂದಿಷ್ಟು ಕಡೆಗಳಲ್ಲಿ ದೀಪಾವಳಿ ಹಬ್ಬದಂದು ಹೋರಿ ಹಬ್ಬ ಮಾಡುವ ಪದ್ಧತಿ ಇದೆ. ಕಲ್ಲಾಪುರ ಗ್ರಾಮದ ರೈತ ಎತ್ತುಗಳ ಮೇಲೆ ಅಪ್ಪು ಅವರ ಚಿತ್ರ ಬಿಡಿಸಿ ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/11/2021 07:05 pm

Cinque Terre

65.07 K

Cinque Terre

3

ಸಂಬಂಧಿತ ಸುದ್ದಿ