ಕುಂದಗೋಳ : ದೀಪಾವಳಿ ಹಬ್ಬ, ದೀಪಗಳ ಸಂಭ್ರಮ ಅಂದ್ರೇ ಅಲ್ಲಿ ಒಂದಿಲ್ಲೊಂದು ವಿಶೇಷತೆ ಇದ್ದೇ ಇರುತ್ತೇ, ಆ ವಿಶೇಷತೆಗೆ ಇಂದು ಕುಂದಗೋಳ ಪಟ್ಟಣದ ಶಿವಾಜಿನಗರ ಸಾಕ್ಷಿಯಾಗಿದೆ.
ಹೌದು ! ಶಿವಾಜಿನಗರದ ಮರಾಠಾ ಸಮುದಾಯದವರು ದೀಪಾವಳಿ ಹಬ್ಬದ ಅಂಗವಾಗಿ ಮಣ್ಣಿನಲ್ಲಿ ಮೂರು ಸ್ಥಳಗಳಲ್ಲಿ ಒಂದಕ್ಕೋಂದು ಭಿನ್ನವಾದ ಛತ್ರಪತಿ ಶಿವಾಜಿ ಕೋಟೆ ನಿರ್ಮಿಸಿ, ಆ ಕೋಟೆ ಒಳಗೆ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ.
ಶಿವಾಜಿ ಮಹಾರಾಜರ ಕೋಟೆಯ ಜೊತೆ ಜೊತೆಗೆ ಅಲಂಕಾರಿಕ ವಸ್ತುಗಳನ್ನಿಟ್ಟು, ದೀಪಾಲಂಕಾರ ಮಾಡಿ ಕೆರೆ, ಬಾವಿಗಳನ್ನು ಸಹ ಕೋಟೆ ಪಕ್ಕದಲ್ಲಿ ನಿರ್ಮಿಸಿದ್ದಾರೆ.
ಇನ್ನೂ ಮುಂಬುರುವ ಗೌರಿ ಹುಣ್ಣಿಮೆವರೆಗೂ ಈ ಕೋಟೆ ಶಿವಾಜಿ ಪೂಜೆ ಮುಂದುವರೆದು, ಆ ಬಳಿಕ ವಿಠ್ಠೋಬಾ ರುಕ್ಮಿಣಿ ದಿಂಡಿ ಉತ್ಸವದವರು ಸಹ ಈ ಮಣ್ಣಿನಲ್ಲಿ ಅದು ಈ ಚಿಣ್ಣರರು, ಯುವಕರ ಕೈಯಲ್ಲಿ ನಿರ್ಮಾಣವಾದ ಶಿವಾಜಿ ಕೋಟೆ ವೀಕ್ಷಿಸಲಿದ್ದಾರಂತೆ.
ಒಟ್ಟಾರೆ ಥೇಟ್ ಶಿವಾಜಿ ಕೋಟೆಯನ್ನೆ ಹೋಲುವ ರೀತಿಯಲ್ಲಿ ಕೋಟೆ ನಿರ್ಮಿಸಿದ ಚಿಣ್ಣರರ ಜಾಣ್ಮೆಗೆ ಬೇಷ್ ಎನ್ನಲೇಬೇಕು.
Kshetra Samachara
04/11/2021 10:28 pm