ಕುಂದಗೋಳ : ಸದಾ ಒಂದಿಲ್ಲೊಂದು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೆಸರಾಗುವ ಕುಂದಗೋಳ ತಾಲೂಕಿನ ಬು.ಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದರಿಂದ ಐದನೇ ತರಗತಿ ಮಕ್ಕಳು ಶಿಕ್ಷಕರು ಇಂದು ತಮ್ಮ ಶಾಲೆಯಲ್ಲಿ ಕನ್ನಡದ ಕಂಪನ್ನೇ ಹರಿಸಿದ್ದಾರೆ.
ಹೌದು ! ಶಾಲಾ ಮಕ್ಕಳು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಕ್ಕೆ ಬಣ್ಣದ ಹಳದಿ ಕೆಂಪು ಬಟ್ಟೆಯನ್ನು ಮಕ್ಕಳು, ಶಿಕ್ಷಕರು ಧರಿಸಿ ಕೈಯಲ್ಲಿ ನಾಡಧ್ವಜ ಕೆಂಪು ಹಳದಿ ಬಲೂನು ಹಿಡಿದು ಕಂಗೋಳಿಸಿದರು.
ಬಳಿಕ ನಾಡಗೀತೆ, ನಿತ್ಯೋತ್ಸವ ಗೀತೆ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಗಳಿಗೆ ಸೊಂಟ ಬಳುಕಿಸಿ ಆನಂದ ಪಟ್ಟು ಗ್ರಾಮದೆಲ್ಲೇಡೆ ಸುತ್ತಿ ಕರ್ನಾಟಕ ರಾಜ್ಯೋತ್ಸವದ ಕಂಪನ್ನು ಹರಿಸಿದರು.
Kshetra Samachara
28/10/2021 09:21 pm