ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಕನ್ನಡದ ಝೇಂಕಾರ: ಉತ್ಸಾಹದಿಂದ ಜರುಗಿದ ಕನ್ನಡ ಗೀತ ಗಾಯನ ಅಭಿಯಾನ

ಧಾರವಾಡ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇಂದು ರಾಜ್ಯದಾದ್ಯಂತ ಮಾತಾಡ್ ಮಾತಾಡ್ ಕನ್ನಡ; ಕನ್ನಡಕ್ಕಾಗಿ ನಾವು ಘೋಷಣೆಯಡಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮವು ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಉತ್ಸಾಹದಿಂದ ಜರುಗಿ ಕನ್ನಡದ ಝೇಂಕಾರವನ್ನು ಮೊಳಗಿಸಿತು.

ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲ ಗೀತೆಯಾಗಿ ಬಾರಿಸು ಕನ್ನಡ ಡಿಂಡಿಮವ, ಎರಡನೇ ಗೀತೆಯಾಗಿ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಹಾಗೂ ಮೂರನೇ ಗೀತೆಯಾಗಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಧಾರವಾಡ ತಹಶೀಲ್ದಾರ ಡಾ.ಸಂತೋಷ ಬಿರಾದಾರ ಕಾರ್ಯಕ್ರಮದಲ್ಲಿ ನೆರೆದ ಸಾರ್ವಜನಿಕರಿಗೆ ಕನ್ನಡ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು.

ಮಾಜಿ ಶಾಸಕ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡ ಹೋರಾಟಗಾರರಾದ ಬಿ.ಕೆ. ಹೊಂಗಲ್, ನಿಂಗಣ್ಣ ಕುಂಟಿ, ಶಿವಣ್ಣ ಬೆಲ್ಲದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇನ್ನು ಧಾರವಾಡದ ವಿವಿಧ ಇಲಾಖೆಗಳಲ್ಲೂ ಸಿಬ್ಬಂದಿ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸಿಬ್ಬಂದಿಯಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

28/10/2021 06:28 pm

Cinque Terre

14.52 K

Cinque Terre

0

ಸಂಬಂಧಿತ ಸುದ್ದಿ