ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಹರಭಟ್ಟ ಶಾಲೆಯಲ್ಲಿ ಸಂಗೀತ ಸುಧೆ

ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಕುಂದಗೋಳ : ಪಟ್ಟಣದ ಹರಭಟ್ಟ ಶಾಲಾ ಆವರಣದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗೆ ಸಂಬಂಧಿಸಿದ ಗೀತೆಗಳನ್ನು ಅದರಲ್ಲೂ ವಿಶೇಷವಾಗಿ ನಾಡಗೀತೆಯನ್ನು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಂದುವಂತೆ ಸರಿಯಾಗಿ 11 ಗಂಟೆಗೆ ಏಕೆ ಕಾಲದಲ್ಲಿ ಹಾಡಿದರು.

ಈ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ನಾಡಗೀತೆ ಸೇರಿದಂತೆ ವಿವಿಧ ಕನ್ನಡಪರ ಗೀತೆಗಳಿಗೆ ಹರ್ಲಾಪೂರ ಗ್ರಾಮದ ಸಾಂಸ್ಕೃತಿಕ ಕಲಾ ತಂಡದವರು ಸಾಥ್ ನೀಡಿದರೇ, 8 ರಿಂದ 10 ನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರು ಸೀರೆಯುಟ್ಟು ಅಪ್ಪಟ ಕನ್ನಡತಿಯರಂತೇ ಕಂಗೋಳಿಸಿದರು.

ಇನ್ನೂ ಕನ್ನಡ ರಾಜ್ಯೋತ್ಸವದ ಮಕ್ಕಳ ಪ್ರೇಮಕ್ಕೆ ಹರಭಟ್ಟ ಶಾಲಾ ಶಿಕ್ಷಕರು ಅಷ್ಟೇ ಪ್ರೋತ್ಸಾಹ ತುಂಬಿ, ಮೊದಲೇ ಮಕ್ಕಳನ್ನು ಹಾಡುಗಾರಿಕೆಗೆ ಹುರಿ ದುಂಬಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.

ಒಟ್ಟಾರೆ "ಎಲ್ಲರೂ ಕನ್ನಡದಲ್ಲೇ ಮಾತಾಡಿ" ಎಂಬ ಉದ್ದೇಶದ ಮೂಲಕ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ನಾಡಗೀತೆ ಕಾರ್ಯಕ್ರಮ ಯಶಸ್ವಿಯಾಗಿ ಕುಂದಗೋಳ ಪಟ್ಟಣದ ಹರಭಟ್ಟ್ ಶಾಲಾ ಆವರಣದಲ್ಲಿ ನೆರವೇರಿತು.

ಮಕ್ಕಳು ಶಿಕ್ಷಕರು ಯಶಸ್ವಿ ಕಾರ್ಯಕ್ರಮದ ಕ್ಷಣಗಳನ್ನು ತಮ್ಮ ತಮ್ಮ ಮೊಬೈಲ್'ಗಳಲ್ಲಿ ಸೆರೆ ಹಿಡಿದು ಗ್ರೂಪ್ ಫೋಟೋ ತೆಗೆದುಕೊಂಡರು.

Edited By : Nagesh Gaonkar
Kshetra Samachara

Kshetra Samachara

28/10/2021 05:14 pm

Cinque Terre

26.78 K

Cinque Terre

0

ಸಂಬಂಧಿತ ಸುದ್ದಿ