ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಕುಂದಗೋಳ : ಲಾಕ್ ಡೌನ್ ಬಳಿಕ ಇತ್ತೀಚೆಗಷ್ಟೇ ಚಿತ್ರ ಮಂದಿರ ತೆರೆದು ಸ್ಟಾರ್ ನಟರ ಸಾಲು ಸಾಲು ಸಿನಿಮಾ ಮಲ್ಟಿಪ್ಲೇಕ್ಸ್'ಗಳಲ್ಲಿ ಸದ್ದು ಮಾಡ್ತಿವೆ.
ಇನ್ನು ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿದ "ರಂಗಭೂಮಿ" ಮತ್ತು "ರಂಗಭೂಮಿ ಕಲಾವಿದರು ಸಹ ಲಾಕ್ ಡೌನ್ ಸಂಕಷ್ಟ ಮರೆತು ಮೈ ಕೊಡವಿ ಎದ್ದು ನಿಂತು "ಮತ್ತೊಂಮ್ಮೆ ಬಾ ಮುತೈದೆಯಾಗಿ" ಎಂಬ ನಾಟಕದ ಮೂಲಕ ಸಂಶಿ ಗ್ರಾಮದಲ್ಲಿದ್ದು ಇಡೀ ಕುಂದಗೋಳ ತಾಲೂಕಿನಾದ್ಯಂತ ಸದ್ದು ಮಾಡುತ್ತಿದ್ದಾರೆ.
ಲಾಕ್ ಡೌನ್ ವೇಳೆ ಅಭಿನಯ ಇಲ್ಲದೆ ಖಾಲಿ ಕೂತ ಶ್ರೀ ಕುಮಾರೇಶ್ವರ ಕೃಪಾ ಪೋಷಿತ್ ಪಂಡಿತ್ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ 22 ಕಲಾವಿದರು ಅದೇ ಸಮಯ ಸದುಪಯೋಗ ಪಡಿಸಿಕೊಂಡು ಸ್ವಂತ ಕಥೆ ರಚಿಸಿ, ಆ ಕಥೆಗೆ ಪಾತ್ರಗಳ ಮೂಲಕ ಜೀವ ತುಂಬಿ ತೆರೆಗೆ ತಂದಿರುವ "ಮತ್ತೇ ಬಾ ಮುತ್ತೈದೆಯಾಗಿ" ನಾಟಕ ಕೋವಿಡ್ ಮಾರ್ಗಸೂಚಿ ಅನ್ವಯ ಅಕ್ಟೋಬರ್ 7 ರಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ನೈಟ್ ಕರ್ಫ್ಯೂ'ಗೆ ಅಂತ್ಯ ಹಾಡುವಂತೆ ಕಲಾವಿದರು ಸಿಎಂಗೆ ಮನವಿ ಮಾಡಿದ್ದಾರೆ.
ಸತತ 12 ದಿನಗಳಿಂದ ನಿತ್ಯ 6 ಗಂಟೆ 45 ನಿಮಿಷಕ್ಕೆ ನಾಟಕ ಆರಂಭವಾಗುತ್ತಿದ್ದು, ನಿರೀಕ್ಷೆಗೂ ಮೀರಿ ಜನ ನಾಟಕ ನೋಡಲು ಆಗಮಿಸುತ್ತಿದ್ದಾರೆ.
ಒಟ್ಟಾರೆ ಶ್ರೀ ಕುಮಾರೇಶ್ವರ ಕೃಪಾ ಪೋಷಿತ್ ಪಂಡಿತ್ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಅಂಧ ಅನಾಥರ ಅಭಿವೃದ್ಧಿಗೆ ಬಣ್ಣ ಹಚ್ಚಿದೆ ಬನ್ನಿ ನಾವೂ ನೀವೂ "ಮತ್ತೆ ಬಾ ಮುತ್ತೈದೆಯಾಗಿ ನಾಟಕ ನೋಡಲು ಸಂಶಿ ಗ್ರಾಮಕ್ಕೆ ಹೋಗೋಣ.
Kshetra Samachara
18/10/2021 10:22 pm