ಕುಂದಗೋಳ : ಮತಕ್ಷೇತ್ರದ ಶೆರೇವಾಡ ಗ್ರಾಮ ಪಂಚಾಯತಿ ಹಾಗೂ ನೆಹರು ಯುವ ಕೇಂದ್ರ ಧಾರವಾಡ ವತಿಯಿಂದ ಮಹಾತ್ಮ ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ಶೆರೇವಾಡ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಾನಂದ ಉಳೆಗಡ್ಡಿ ಉಪಾಧ್ಯಕ್ಷ ಮಾದೇವಿ ಅಮಟೂರ, ಸದಸ್ಯರಾದ ಸಿದ್ದಪ್ಪ ಹನ್ನಿ, ಈರಪ್ಪ ಮಟ್ಟಿ ಇಮಾಮಸಾಬ ಛಬ್ಬಿ, ವಿರಪಾಕ್ಷಿ ಯಡವನ್ನರ, ಗುರಸಿದ್ದವ್ವ ಗುಂಜಾಳ, ಪಿಡಿಓ ಎಫ್.ಡಿ ತೋಟದ, ಗ್ರಾ ಪಂ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ನೆಹರು ಯುವ ಕೇಂದ್ರ ಕಾರ್ಯಕರ್ತ ನಾಗರಾಜ ಕಮಾಡೊಳ್ಳಿ ಅಂಗನವಾಡಿ ಸಿಬ್ಬಂದಿಗಳು ಅರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದು ಗ್ರಾಮದಲ್ಲಿ ಸ್ವಚ್ಚತಾ ಆಂದೋಲನ ನಡೆಸಿ ಬೀದಿ ಬದಿಯ ಕಸ ಹಾಗೂ ಚರಂಡಿ ಶುಚಿಗೊಳಿಸಿದರು.
Kshetra Samachara
02/10/2021 03:12 pm