ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಕಣ್ಮನ ಸೆಳೆಯುವ ತಳಿರು ತೋರಣದ ಅಲಂಕಾರ ಮೈ ರೋಮಾಂಚನ ಎನ್ನಿಸುವ ಸಂಗೀತ ಮೈ ಮರೆತು ಕೂತ ಜನಸ್ತೋಮ ಅಬ್ಬಾ ! ಇದು ಸಂಸ್ಕೃತಿ ಇದು ಸಂಪ್ರದಾಯ ಇದು ಕುಂದಗೋಳ ಪಟ್ಟಣದ ನಾಡಗೀರ ವಾಡೆಯ ಸವಾಯಿ ಗಂಧರ್ವರ ಪುಣ್ಯಸ್ಮರಣೆಯ ಕಾರ್ಯಕ್ರಮ.
ಎಸ್..! ಸಂಗೀತ ಲೋಕಕ್ಕೆ ಬ್ರಿಟಿಷರ್ ಕಾಲದಲ್ಲೇ ಕೊಡುಗೆ ಕೊಟ್ಟು ತನ್ನ ಸಂಗೀತದ ಜುಗಲ್ ಬಂಧಿ ಮೂಲಕ ಕುಂದಗೋಳದಲ್ಲಿ ನವಾಬರ ಮನ ತಣಿಸಿದ ನಾಡಗೀರ ವಾಡೆ ಸಂಗೀತ ಕಾರ್ಯಕ್ರಮ ಎಂದ್ರೇ ಜನಮನದಲ್ಲಿ ಎಲ್ಲಿಲ್ಲದ ಉತ್ಸಾಹ ಉನ್ಮಾದ.
ಇಂದಲ್ಲ ನಿನ್ನೆಯಲ್ಲ ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಾಡಗೀರ ವಾಡೆಯಲ್ಲಿ ಸವಾಯಿ ಗಂಧರ್ವರ 69ನೇ ಪುಣ್ಯಸ್ಮರಣೆ ಅಂಗವಾಗಿ ಇಂದು ಅಂತಹ ವೈಭೋಗ ಕೋವಿಡ್ ಹಿನ್ನೆಲೆಯಲ್ಲಿ ಅತಿ ಸರಳವಾದ್ರೂ ಅಹೋರಾತ್ರಿ ಬದಲಾಗಿ ದಿನವೀಡಿ ಅತಿ ಸುಂದರವಾಗಿ ಕಾರ್ಯಕ್ರಮ ಮೂಡಿಬಂದಿತು.
ಅರೆ ಇಂದಿನ ಕಾರ್ಯಕ್ರಮ ಸವಾಯಿ ಗಂಧರ್ವರ ಪುಣ್ಯಸ್ಮರಣೆ ಆದ್ರೇ ನಾಡಗೀರ ವಾಡೆಯ ಸಂಕ್ಷಿಪ್ತ ಇತಿಹಾಸ ಪರಿಚಯವು ಇಂದಿನ ಪೀಳಿಗೆಗೆ ಅಷ್ಟೇ ಮುಖ್ಯ ಆ ಮಾಹಿತಿ ಹೀಗಿದೆ.
ಒಟ್ಟಾರೆ ಕಾಲನ ಆಟದ ಆಧುನಿಕತೆಯಲ್ಲಿ ಸಂಸ್ಕೃತಿ ಸಂಪ್ರದಾಯ ಮರೆಯಾಗುತ್ತಿರುವ ದಿನಗಳಲ್ಲಿ ಇಂದಿಗೂ ಸಂಗೀತ ದಾಸೋಹ ಮಾಡುತ್ತಿರುವ ನಾಡಗೀರ ವಾಡೆ ಇಂದು ಎಂದಿಗೂ ಇತಿಹಾಸ ಪ್ರಸಿದ್ಧ.
Kshetra Samachara
01/10/2021 10:51 pm