ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗೂಳಿ ಹಳ್ಳಿ ಸಂಸ್ಕೃತಿ ಸಂಪ್ರದಾಯಕ್ಕೆ ಸೈ ಎನ್ನುವ ಬಸವೇಶ್ವರನ ಆರಾಧನೆ

ಕುಂದಗೋಳ : ಈ ಹಳ್ಳಿಗಳು ಅಲ್ಲಿನ ರೈತಾಪಿ ಜನರು ಆ ಸಂಸ್ಕೃತಿ ಆರಾಧನೆ ಎಲ್ಲವೂ ಎಷ್ಟು ಚೆಂದ್, ಗ್ರಾಮದ ದೈವಿ ಬಸವೇಶ್ವರನ ಆರಾಧನೆ ಕಾರ್ಯಕ್ರಮವನ್ನು ತಮ್ಮ ಮನೆ ಕಾರ್ಯಕ್ರಮಕ್ಕಿಂತ ಅಚ್ಚುಕಟ್ಟಾಗಿ ಮಾಡಿ ಎಲ್ಲರೂ ಒಂದೇ ಎಂಬ ಭಾವ ಸಾರುವ ಕ್ಷಣಗಳಿಗೆ ಇಂದು ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮ ಸಾಕ್ಷಿಯಾಯಿತು.

ಹೌದು ! ಕಡಪಟ್ಟಿ ಗ್ರಾಮದ ಗೂಳಿ ಬಸವೇಶ್ವರ ಆರಾಧನೆ ಕಾರ್ಯಕ್ರಮದ ನಿಮಿತ್ತ ಇಂದು ಕಡಪಟ್ಟಿ ಗ್ರಾಮಸ್ಥರು ಗೂಳಿ ಬಸವೇಶ್ವರನ ಕರ್ತೃ ಗದ್ದುಗೆಗೆ ಪೂಜಾಭಿಷೇಕ ನೇರವೇರಿಸಿ ಊರಲೆಲ್ಲಾ ಚಕ್ಕಡಿ ಎತ್ತುಗಳ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಆಧ್ಯಾತ್ಮಿಕ ದೃಷ್ಟಿ ಚೈತನ್ಯವನ್ನು ಬಿಂಬಿಸಿದರು.

ಇದೆಲ್ಲದೆ ನಿನ್ನೆ ರಾತ್ರಿ ಇಡೀ ದೇವರ ನಾಮಸ್ಮರಣೆಯ ಭಜನಾ ಕಾರ್ಯಕ್ರಮ ಕಳೆಗುಂದುತ್ತಿರುವ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸಿ ಭಕ್ತಿ ಸಾಕ್ಷಾತ್ಕಾರದ ನೆಲೆ ತಿಳಿಸಿಕೊಟ್ಟಿತು. ಗ್ರಾಮದ ಗುರು ಹಿರಿಯರು ಯುವಕರು ಒಂದಾಗಿ ನೆರೆದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೇರವೇರಿಸಿ ಹಳ್ಳಿಗಳಲ್ಲಿನ ಸಂಪ್ರದಾಯದ ಜೀವಕಳೆಯನ್ನು ಎತ್ತಿ ಸಾರಿ ಮತ್ತೋಮ್ಮೆ ಕಾಣದ ರೋಗ ಬರದಂತೆ ಕಾಪಾಡುವಂತೆ ಬಸವೇಶ್ವರನಿಗೆ ಪೂಜೆ ಸಮರ್ಪಿಸಿದರು.

Edited By : Nagesh Gaonkar
Kshetra Samachara

Kshetra Samachara

27/09/2021 04:07 pm

Cinque Terre

32.18 K

Cinque Terre

0

ಸಂಬಂಧಿತ ಸುದ್ದಿ