ಕುಂದಗೋಳ : ಪ್ರತಿಯೊಂದು ಬೀದಿ ಚರಂಡಿಯನ್ನು ನಿಸ್ಸಂಕೋಚವಾಗಿ ಶುಚಿಗೊಳಿಸುವ ಪೌರಕಾರ್ಮಿಕರ ಕಾಯಕ ಭಗವಂತನಿಗೆ ಪ್ರೀಯವಾದದು ಎಂದು ಅಭಿನವ ಕಲ್ಯಾಣಪುರ ಬಸವಣ್ಣನವರು ಹೇಳಿದರು.
ಅವರು ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದರು, ಬಳಿಕ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಅಗತ್ಯ ಸಹಾಯಹಸ್ತ ಕಲ್ಪಿಸಿದ ಪೌರ ಕಾರ್ಮಿಕರ ವೃತ್ತಿ ಮಾತ್ರವಲ್ಲಾ ಮಾನವೀಯತೆಯಲ್ಲೂ ಶ್ರೇಷ್ಠ ಎಂದರು. ಕಾರ್ಯಕ್ರಮದ ಬಳಿಕ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಜೊತೆ ಆಟೋಟ ಏರ್ಪಡಿಸಿ ವಿಜೇತ ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.
ಆಟೋಟದ ಬಳಿಕ ಪೌರ ಕಾರ್ಮಿಕರಿಗೆ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು, ಈ ಸಂದರ್ಭದಲ್ಲಿ ಸದಸ್ಯ ಪ್ರವೀಣ ಬಡ್ನಿ, ದಿಲೀಪ್ ಕಲಾಲ್, ಸೇರಿದಂತೆ ಸರ್ವ ಸದಸ್ಯರು ಪ.ಪಂ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
23/09/2021 05:16 pm