ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಘ್ನೇಶ್ವರನಿಗೆ ವಿದಾಯ..

ಧಾರವಾಡ: ಐದು ದಿನಗಳ ಪೂಜಿತಗೊಂಡ ವಿಘ್ನೇಶ್ವರನಿಗೆ ಭಕ್ತರು ಇಂದು ಸಂಭ್ರಮದ ವಿದಾಯ ಹೇಳಿದ್ದಾರೆ.

ಕಳೆದ ಶುಕ್ರವಾರ ಭಕ್ತರ ಮನೆಗೆ ಬಂದಿದ್ದ ವಿಘ್ನೇಶ್ವರನು ಐದು ದಿನಗಳ ಕಾಲ ಪೂಜಿಸಲ್ಪಟ್ಟಿದ್ದ. ಈ ಅವಧಿಯಲ್ಲಿ ವಿವಿಧ ಭಕ್ಷ್ಯಗಳನ್ನು ಮಾಡಿ ಗಣಪನಿಗೆ ನೈವೇದ್ಯ ಅರ್ಪಿಸಲಾಯಿತು.

ಕಳೆದ ವರ್ಷ ಕೊರೊನಾದಿಂದ ಕಳೆಗುಂದಿದ್ದ ಗಣೇಶೋತ್ಸವವನ್ನು ಪ್ರಸಕ್ತ ವರ್ಷ ಭಕ್ತರು ಅದ್ಧೂರಿಯಿಂದ ಆಚರಿಸಿದರು. ಚಿನ್ನರು ಪಟಾಕಿ ಸಿಡಿಸಿ ಸಂಭ್ರಮಿಸುವುದರೊಂದಿಗೆ ಗಣಪನಿಗೂ ಸಂಭ್ರಮದ ವಿದಾಯ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ಹಳ್ಳದಲ್ಲಿ ಗಣಪನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಯಿತು. ಇನ್ನೂ ಕೆಲವು ಕಡೆಗಳಲ್ಲಿ ಏಳು ದಿನ, ಒಂಬತ್ತು ದಿನ ಹಾಗೂ ಹನ್ನೊಂದು ದಿನಕ್ಕೆ ಗಣಪತಿ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ.

Edited By :
Kshetra Samachara

Kshetra Samachara

14/09/2021 09:54 pm

Cinque Terre

60 K

Cinque Terre

0

ಸಂಬಂಧಿತ ಸುದ್ದಿ