ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ಧಾರವಾಡದ ವಾರ್ಡ್ ನಂಬರ್ 16ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಾರ್ಡ್ ನಂಬರ್ 16 ರಲ್ಲಿ ಬರುವ ಪಾಲನಕರ ಚಾಳ, ಬಿರಾದಾರ ಅವರ ಮನೆಯ ಮುಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಸನ್ಮತಿ ನಗರ ರಸ್ತೆ ಕಾಮಗಾರಿ, ರಾಮನಗರದಲ್ಲಿ ರಸ್ತೆ ಕಾಮಗಾರಿ, ಕೆಂಪಗೇರಿ ರಸ್ತೆ ಕಾಮಗಾರಿ ಹಾಗೂ ವಾರ್ಡ್ ನಂಬರ್ 15 ರಲ್ಲಿ ಬರುವ ಕಾಕಾರ ಗಲ್ಲಿಯ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭೂಮಿಪೂಜೆ ನೆರವೇರಿಸಿದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
11/09/2021 07:31 pm