ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಪ್ರತಿಷ್ಠಾಪನೆ ಮಾಡಿದ ಗೃಹಿಣಿಯರ
ವಿಶೇಷವಾಗಿ ಅಲಂಕರಿಸಿ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಹೌದು..ಚಿನ್ನದ ಆಭರಣ, ಬೆಳ್ಳಿ ಮತ್ತು ನಗ-ನಾಣ್ಯ ಇಟ್ಟು ಪೂಜೆ ನೆರವೇರಿಸಿದ ಗೃಹಿಣಿಯರು, ಐದು ಮಾದರಿಯ ಹಣ್ಣು, ಹೋಳಿಗೆ ಇತ್ಯಾದಿಗಳ ನೈವೇದ್ಯ ಸಮರ್ಪಣೆಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಇನ್ನೂ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ವರಮಹಾಲಕ್ಷ್ಮಿ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಸಿದ್ಧಿಯಾಗಲಿ, ಧನ ಕನಕ ಪ್ರಾಪ್ತಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
Kshetra Samachara
20/08/2021 03:31 pm