ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ವಧರ್ಮ ಸಮನ್ವಯತೆ ಸಾರುವ ಉದ್ಯಮಿ ವಿ.ಎಸ್.ವಿ ಪ್ರಸಾದ: ಮಸೀದಿ ಕಟ್ಟಿಸಿದ ಮಹಾಚೇತನ

ಹುಬ್ಬಳ್ಳಿ: ಆತ ಒಬ್ಬ ಉದ್ಯಮಿ ಹಾಗೂ ಗುತ್ತಿಗೆದಾರ. ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಆತ ಈಗ ಸರ್ವಧರ್ಮ‌ ಸಮನ್ವಯತೆ ಮೆರೆದಿದ್ದಾರೆ‌. ಹಾಗಿದ್ದರೇ ಯಾರು ಆ ವ್ಯಕ್ತಿ ಅಂತೀರಾ ತೋರಸ್ತೀವಿ ನೋಡಿ..

ವಾಣಿಜ್ಯನಗರಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಫ್ ಆಪ್ ಕಂಪನಿಯ ಮಾಲೀಕ ಚಿಗರುಪಾಟಿ ಡಾ. ವಿ.ಎಸ್.ವಿ ಪ್ರಸಾದ ಅವರು ಮುಸ್ಲಿಂ ಧರ್ಮದ ಜನರಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿಯನ್ನು ನಿರ್ಮಾಣ ಮಾಡಿ ದಾನವಾಗಿ ಕೊಡಲು ಮುಂದಾಗಿದ್ದಾರೆ. ಹೌದು‌‌.. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಚಳಮಟ್ಟಿ ಗ್ರಾಮದಲ್ಲಿ ವಿ.ಎಸ್.ವಿ ಪ್ರಸಾದ ಅವರು ದಾನವಾಗಿ ನಿರ್ಮಿಸಿಕೊಟ್ಟ ಮಸೀದಿ ಉದ್ಘಾಟನಾ ಹಾಗೂ ಶಾಲಾ ಕಂಪೌಂಡ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿತು. ಉದ್ಘಾಟನೆಯನ್ನು ಶಾಸಕರಾದ ಸಿ.ಎಂ ನಿಂಬಣ್ಣನವರ ಉದ್ಘಾಟಿಸಿದರು. ಸಮಾಜದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಗಳು ಇದ್ದರೂ ಸಮಾಜಕ್ಕಾಗಿ ಸಹಾಯ ಮಾಡುವವರು ತುಂಬಾ ವಿರಳ. ಅಂತಹ ವಿರಳ ವ್ಯಕ್ತಿಗಳಲ್ಲಿ ಮೇಲ್ಪಂಕ್ತಿಯಲ್ಲಿ ವಿ.ಎಸ್‌.ವಿ ಪ್ರಸಾದ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳು ನಮಗೆ ದೊರಕಿರುವುದು ನಮ್ಮ ಸೌಭಾಗ ಎಂದು ಶಾಸಕ ನಿಂಬಣ್ಣವರ ಅಭಿನಂದನೆ ಸಲ್ಲಿಸಿದರು.

ತಮ್ಮ ಸ್ವರ್ಣಾ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿ, ಅವರಿಗೆಲ್ಲ ಅನ್ನದಾತರಾಗಿರುವ ವಿ.ಎಸ್.ವಿ ಪ್ರಸಾದ, ಸಮಾಜದಲ್ಲಿ ಸರ್ವಧರ್ಮದ ಜನಾಂಗದವರಿಗೆ ಆಹಾರದ ಸಾಮಗಿ ಕಿಟ್‌ಗಳು, ಆರೋಗ್ಯಕ್ಕಾಗಿ ವೈದ್ಯಕೀಯ ಸಲಕರಣೆಗಳು, ಶಿಕ್ಷಣ, ಮಹಿಳಾ ಸಬಲಿಕರಣ, ಕ್ರೀಡೆ, ಸಾಂಸ್ಕೃತಿಕರಂಗಕ್ಕೆ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ಚಾಚಿ ನೆರವು ನೀಡುತ್ತಿದ್ದಾರೆ. ಇದಕ್ಕೆ ಚಳಮಟ್ಟಿ ಗ್ರಾಮದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯೇ ನಿದರ್ಶನ ಎಂದು ಇಲ್ಲಿನ ಜನರು ಕೊಂಡಾಡಿದರು.

ಧರ್ಮದ ಜನಾಂಗದವರನ್ನು ಎಲ್ಲರೂ ಒಂದೇ ಎಂಬುವುದನ್ನು ಬಸವಣ್ಣನವರ ವಚನದ ಮೂಲಕ ಪ್ರಸಾದರವರ ಗುಣಗಾನ ಮಾಡುತ್ತ ಮಸೀದಿ ನಿರ್ಮಿಸಿಕೊಟ್ಟು ಸಾಮಾಜಿಕ ಸಾಮರಸ್ಯ, ಐಕ್ಯತೆ ಕಾಪಾಡಿದ್ದು, ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು‌ ಗ್ರಾಮಸ್ಥರು ಹಾರೈಸಿದರು.

Edited By : Manjunath H D
Kshetra Samachara

Kshetra Samachara

10/08/2021 05:32 pm

Cinque Terre

36.09 K

Cinque Terre

3

ಸಂಬಂಧಿತ ಸುದ್ದಿ