ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮಹಿಳೆಯರ ರಕ್ಷಣೆಗಾಗಿ ಮೋಂಬತ್ತಿ ಮೆರವಣಿಗೆ

ಧಾರವಾಡ : ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರವ್ಯಾಪ್ತಿ ಹೆಣ್ಣು ಮಕ್ಕಳ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಎನ್ ಎಸ್ ಯುಐನ್ ಹಾಗೂ ಯಂಗ್ ಪ್ಲೇಮ್ಸ್ ಯೂಥ್ ಅಸೋಸಿಯೇಷನ್ ವತಿಯಿಂದ ನಗರದ ಸಪ್ತಾಪೂರ ಬಾವಿಯಿಂದ ಕೆಸಿಡಿ ವೃತ್ತದವರೆಗೂ ಕ್ಯಾಂಡಲ್ ಮಾರ್ಚ್ ನಡೆಸಿದ ಯುವಕರು, ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಗಳನ್ನ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ನಾಡಿನ ಹಾಗೂ ರಾಷ್ಟ್ರದ ಹೆಣ್ಣ ಮಕ್ಕಳ ರಕ್ಷಣೆ ಮಾಡುವುದು ಹಾಗೂ ಅವರಲ್ಲಿರುವ ಭಯವನ್ನು ಹೋಗಿಸುವುದು ನಮ್ಮ ಆಧ್ಯ ಕರ್ತವ್ಯವಾಗಿರುತ್ತದೆ.

ಈ ಸಂದರ್ಭದಲ್ಲಿ ಎನ್ ಎಸ್ ಯುಐ ನ್ ಜಿಲ್ಲಾ ಅದ್ಯಕ್ಷ ರೋಹನ್ ಹಿಪ್ಪರಗಿ ಹಾಗೂ ಇರ್ಫಾನ್ ಪಠಾಣ ಯುಥ ಕಾಂಗ್ರೆಸ್ ನ್ ಸೌರಭ ಮಾಷೇಕರ್,ಯಂಗ್ ಪ್ಲೇಮ್ಸ್ ಯೂಥ್ ಅಸೋಸಿಯೇಷನ್ ಪ್ರದಾಧಿಕಾರಿಗಳಾದ ರೋಷನ್ ಎಮರೋಜ್,ವಿಕಾಸ ಕ್ಷತ್ರಿಯ, ಹಾಗೂ ಸಂಜಯ್ ಲಕ್ಕಣ್ಣವರ, ಸೇರಿದಂತೆ ಇತರರು ಇದ್ದರು.

Edited By : Nagesh Gaonkar
Kshetra Samachara

Kshetra Samachara

06/08/2021 09:35 pm

Cinque Terre

18.94 K

Cinque Terre

0

ಸಂಬಂಧಿತ ಸುದ್ದಿ