ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪವಾಡ ಪುರುಷನ ತೇರನೆಳೆದು ಸಂಭ್ರಮಿಸಿದ ಭಕ್ತರು

ಧಾರವಾಡ: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಪವಾಡ ಪುರುಷ ಗರಗದ ಮಡಿವಾಳೇಶ್ವರನ ಜಾತ್ರಾ ಮಹೋತ್ಸವ ಸೋಮವಾರ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಅದ್ಧೂರಿಯಿಂದ ನೆರವೇರಿತು.

ಕಳೆದ ವರ್ಷ ಕೊರೊನಾ ಲಾಕಡೌನ್ ಆಗುವುದಕ್ಕಿಂತ ಪೂರ್ವದಲ್ಲೇ ಗರಗದ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನೆರವೇರಿತ್ತು. ಪ್ರಸಕ್ತ ವರ್ಷ ಕೊರೊನಾ ಮಧ್ಯೆಯೂ ತನ್ನ ಕಳೆ ಕಳೆದುಕೊಳ್ಳದ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನೆರವೇರಿದ್ದು, ಭಕ್ತ ಸಮೂಹಕ್ಕೆ ಸಂತಸವನ್ನುಂಟು ಮಾಡಿದೆ.

ಬೆಳಿಗ್ಗೆಯಿಂದಲೇ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಮಧ್ಯಾಹ್ಯ 4 ಗಂಟೆಯ ಸುಮಾರಿಗೆ ಕರ್ತೃ ಗದ್ದುಗೆಯಿಂದ ಮಡಿವಾಳೇಶ್ವರರ ರಥ ಎಳೆಯಲ್ಪಟ್ಟಿತು. ಅಲ್ಲಿ ಸೇರಿದ್ದ ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣಿ, ನಿಂಬೆಹಣ್ಣು ತೂರಿ ಪವಾಡ ಪುರುಷನಿಗೆ ಭಕ್ತಿಯ ನಮನ ಸಲ್ಲಿಸಿದರು.

ಗರಗ, ತಡಕೋಡ, ಉಪ್ಪಿನ ಬೆಟಗೇರಿ, ಧಾರವಾಡ, ಹುಬ್ಬಳ್ಳಿ, ಹಂಗರಕಿ, ಕರಡಿಗುಡ್ಡ, ಪುಡಕಲಕಟ್ಟಿ, ಮರೇವಾಡ ಸೇರಿದಂತೆ ನೂರಾರು ಗ್ರಾಮಗಳಿಂದ ಈ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದರು.

ಧಾರವಾಡ ಜಿಲ್ಲಾ ಪೊಲೀಸರು ಜಾತ್ರಾ ಮಹೋತ್ಸವದ ಅಂಗವಾಗಿ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಿದ್ದರು.

Edited By : Nagesh Gaonkar
Kshetra Samachara

Kshetra Samachara

01/03/2021 10:27 pm

Cinque Terre

26.94 K

Cinque Terre

3

ಸಂಬಂಧಿತ ಸುದ್ದಿ