ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 40 ಗಂಟೆಗಳಲ್ಲಿ ಶ್ರೀ ಕ್ಷೇತ್ರ ಉಳವಿ ಮಾರ್ಗ ಕ್ರಮಿಸಿದ ಎತ್ತಿನ ಬಂಡಿ

ಕುಂದಗೋಳ : ಜಾತ್ರೆ ವೈಭವದ ಎತ್ತಿನ ಬಂಡಿಯ ಪ್ರಯಾಣದ ಮೆರುಗೆ ಮರೆಯಾಗುತ್ತಿರುವ ದಿನಗಳಲ್ಲಿ ಇಲ್ಲೋಂದು ಎತ್ತಿನ ಬಂಡಿ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಸನ್ನಿಧಿಯನ್ನು ಕೇವಲ 40 ಗಂಟೇಗಳಲ್ಲಿ ತಲುಪಿ ಮರಳಿ ಸ್ವ ಗ್ರಾಮ ಕುಂದಗೋಳ ತಲುಪಿದೆ.

ಹೌದು ! ಕುಂದಗೋಳ ಪಟ್ಟಣದ ರವದಿ ಕುಟುಂಬಸ್ಥರು ಜಾತ್ರೆಗೆ ಹೂಡಿದ ಎತ್ತಿನ ಬಂಡಿ ಉಳವಿ ಚನ್ನಬಸವೇಶ್ವರ ಸನ್ನಿಧಿ ತಲುಪಿ ದೇವರ ದರ್ಶನ ಪಡೆದು 165 ಕಿ.ಲೋ ಮೀಟರ್ ರಸ್ತೆ ಮಾರ್ಗವನ್ನು ಕೇವಲ 40 ಗಂಟೆಗಳಲ್ಲಿ ಕ್ರಮಿಸಿದೆ.

ಜಾತ್ರೆ ಮುಗಿಸಿ ಗ್ರಾಮಕ್ಕೆ ಮರಳಿದ ಬಂಡಿಯನ್ನು ಯುವಕರು ಬೈಕ್ ರ್ರ್ಯಾಲಿ ಜೊತೆ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಸ್ವಾಗತಿಸಿದರೇ ಗ್ರಾಮಸ್ಥರು ಪೂಜೆ ಮಾಡಿ ಸ್ವಾಗತಿಸಿದರು.

ಈ ಬಂಡಿಗೆ ಹೂಡಿದ ಸಹಜ ಎತ್ತುಗಳು ಈ ಸಾಹಸ ಮಾಡಿದ್ದು ತಾಲೀಮು ಮಾಡಿಸಿದ್ದರೆ ಅದೆಷ್ಟೋ ಬೇಗ ಮರಳುತ್ತಿದ್ದವೂ ಎಂದು ಜನ ಅಂದಾಜಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/03/2021 10:05 pm

Cinque Terre

49.45 K

Cinque Terre

30

ಸಂಬಂಧಿತ ಸುದ್ದಿ