ಕುಂದಗೋಳ : ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಮುಖ್ಯ ಅಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿಜೇತರಾದ ಸಂಶಿ ಕೆ.ಎಲ್.ಇ ಕಾಲೇಜು ವಿದ್ಯಾರ್ಥಿಗಳ ಸಾಧನೆ ಆಡಳಿತ ಮಂಡಳಿಗೆ ಸಂತಸ ತಂದಿದ್ದು ಮುಂಬರುವ ಜಿಲ್ಲಾ ಮಟ್ಟದ ವಿಜಯವು ನಮ್ಮದಾಗಲಿ ಎಂದು ಎ.ಬಿ.ಉಪ್ಪಿನ ಹೇಳಿದರು.
ಅವರು ಕುಂದಗೋಳ ಪಟ್ಟಣದ ಹರಭಟ್ಟ ಪದವಿ ಕಾಲೇಜಿನಲ್ಲಿ ಇತ್ತಿಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ವಿಭಾಗದಲ್ಲಿ ಥ್ರೋ ಬಾಲ್ ಪ್ರಥಮ, ಕಬಡ್ಡಿ ದ್ವೀತಿಯ, ಖೋಖೋ ದ್ವೀತಿಯ, ಸೆಟಲ್ ದ್ವೀತಿಯ, ಟೆನಿಕ್ಯಾಯಟ್ ಪ್ರಥಮ ವಿಜೇತ ಹಾಗೂ ಬಾಲಕಿಯರ ವಿಭಾಗದಲ್ಲಿ ಥ್ರೂ ಬಾಲ್ ದ್ವೀತಿಯ, ಸೆಟಲ್ ಬ್ಯಾಡ್ಮಿಂಟನ್ ಪ್ರಥಮ, ಟೈನಿಕಾಯೆಟ್ ಪ್ರಥಮ ಸ್ಥಾನದಲ್ಲಿ ವಿಜೇಯಿಯಾದ ಸಂಶಿ ಕೆ.ಎಲ್.ಇ ಕಾಲೇಜು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಪರವಾಗಿ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಶಿ ಕೆ.ಎಲ್.ಇ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯ ಎಸ್.ಸಿ.ತುರಾಯಿ ಶಿಕ್ಷಕ ರಮೇಶ್ ಅತ್ತಿಗೇರಿ, ಬಸಣ್ಣ ಕೋರಿ, ಶಾಲಾ ಶಿಕ್ಷಕ ಬಳಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
01/03/2021 05:34 pm