ಕುಂದಗೋಳ : ಧಾರ್ಮಿಕ ಕಾರ್ಯಕ್ರಮಗಳು ಹಬ್ಬ ಹರಿದಿನ ಉತ್ಸವ ಅಂದ್ರೇ ಈ ಹಳ್ಳಿಗಳ ಜನ ರೈತಾಪಿ ವರ್ಗಕ್ಕೆ ಹೊಸ ಹಿಗ್ಗು ಸಂಭ್ರಮ.
ಅದರಲ್ಲೂ ಆಯಾ ಗ್ರಾಮದ ಹಳ್ಳಿಯ ಆರಾಧ್ಯದೇವರ ವಿಶಿಷ್ಟ ಕಾರ್ಯಕ್ರಮ ಅಂದ್ರೇ ದುಪ್ಪಟ್ಟ ಸಂತಸ. ಅಂತಹ ಸಂತಸಕ್ಕೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮ ಸಾಕ್ಷಿಯಾಯಿತು.
ಕಡಪಟ್ಟಿ ಗ್ರಾಮದ ಬಸವೇಶ್ವರ ದೇವರ ಬಹು ದಿನಗಳ ಬೇಡಿಕೆ ನೂತನ ಗಡ್ಡಿ ತೇರು ನಿರ್ಮಾಣದ ಸಂಭ್ರಮ ನಿನ್ನೆ ಯಶಸ್ವಿಯಾಯಿತು.
ನೂತನ ರಥವನ್ನು ಮಳಲಿ ಗ್ರಾಮದಿಂದ ಪೂಜೆ ಮಂತ್ರ ಪಠನೆ ನೆರವೇರಿಸಿ ಕಡಪಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ವರೆಗೆ ವಿವಿಧ ವಾದ್ಯ ಮೇಳಗಳ ಜೊತೆ ಯುವಕರ ಬೈಕ್ ರ್ರ್ಯಾಲಿ ಮೂಲಕ ಬರಮಾಡಿ ಕೊಳ್ಳಲಾಯಿತು.
ಗ್ರಾಮಕ್ಕೆ ಆಗಮಿಸಿದ ರಥಕ್ಕೆ ಭಕ್ತಾಧಿಗಳಿಂದ ಪೂಜೆ ಹಾಗೂ ಕುಂಭ ಕೋಡಗಳ ಮೆರವಣಿಗೆ ನೆರವೇರಿತು. ಬಳಿಕ ದೇವಸ್ಥಾನದಲ್ಲಿ ಅಲ್ಲಾಪುರ ಕಡಪಟ್ಟಿ ಗ್ರಾಮಸ್ಥರು ಪ್ರಸಾದ ಸೇವಿಸಿ ದೇವರ ಕೃಪೆಗೆ ಪಾತ್ರರಾದರು.
Kshetra Samachara
22/02/2021 01:50 pm