ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಶ್ರೀ ಕ್ಷೇತ್ರ ಉಳವಿಗೆ, ಶೃಂಗರಿಸಿರುವ ಚಕ್ಕಡಿಯಲ್ಲಿ ಸಾಗುತ್ತಿರುವ ಭಕ್ತರ ದಂಡು

ವರದಿ:ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ:ಉಳವಿ ಕ್ಷೇತ್ರಕ್ಕೆ ಕಲಘಟಗಿ ಪಟ್ಟಣದ ಮೂಲಕ ಭಕ್ತರ ದಂಡು ಚಕ್ಕಡಿಯ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿರುವ ದೃಶ್ಯ ಸಾಮಾನ್ಯವಾಗಿದೆ.

ಹೌದು ! ಉಳವಿಯ ಜ್ಞಾನ‌ ನಿಧಿ‌ ಶ್ರೀ ಚೆನ್ನಬಸವೇಶ್ವರನ ಜಾತ್ರೋತ್ಸವಕ್ಕೆ,ಕಲಘಟಗಿ ತಾಲೂಕು,ಉತ್ತರ ಕರ್ನಾಟಕ ಸೇರಿದಂತೆ,ರಾಜ್ಯದ ನಾನಾ ಕಡೆಗಳಿಂದ ಚಕ್ಕಡಿ,ಟ್ರ್ಯಾಕ್ಟರ್,ದ್ವಿಚಕ್ರ ವಾಹನಗಳಲ್ಲಿ ಶ್ರೀಕ್ಷೇತ್ರ ಉಳವಿಗೆ ಭಕ್ತರು ಕುಟುಂಬ ಸಮೇತ ಪ್ರಯಾಣಿಸುತ್ತಿದ್ದಾರೆ.

ಶೃಂಗರಿಸಿರುವ ಜೋಡ ಎತ್ತಿನ ಚಕ್ಕಡಿಗಳಲ್ಲಿ ನಿತ್ಯ ಭಕ್ತರ ದಂಡು ಕಲಘಟಗಿ ಮಾರ್ಗವಾಗಿ ಹಾಯ್ದು ಹೋಗುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

"ಹರ ಹರ ಮಹಾದೇವ" ಹಾಗೂ ಶ್ರೀ ಚೆನ್ನಬಸವೇಶ್ವರನ ಜೈಘೂಷ,ಚಕ್ಕಡಿಯ‌ಗಂಟೆಯ ನೀನಾದ ಕೇಳಿ ಬುರುತ್ತಿದ್ದು,ಕಲಘಟಗಿ ಉಳವಿ ಕ್ಷೇತ್ರಕ್ಕೆ ತೆರಳಲು ಮಹಾದ್ವಾರ ಇದ್ದಂತೆ ಎಂದರೆ ತಪ್ಪಾಗಲಾರದು.

Edited By : Nagesh Gaonkar
Kshetra Samachara

Kshetra Samachara

21/02/2021 05:35 pm

Cinque Terre

39.57 K

Cinque Terre

2

ಸಂಬಂಧಿತ ಸುದ್ದಿ